ಲಾರಿ ಹಿಂಬದಿಗೆ ಕಾರು ಡಿಕ್ಕಿ-ಏಳು ಜನರಿಗೆ ಗಾಯ.

ಕೂಡ್ಲಿಗಿ.ನ.22:- ಕೂಲಿ ಕೆಲಸಕ್ಕೆಂದು ಕಾರಿನಲ್ಲಿ ಕಲಬುರಗಿಯಿಂದ ಬೆಂಗಳೂರು ಕಡೆ ಹೋಗುತ್ತಿರುವಾಗ್ಗೆ ಕೂಡ್ಲಿಗಿ ಹೊರವಲಯದ ಬೆಂಗಳೂರು ರಸ್ತೆಯ  ಗೌಡ್ರು ಪೆಟ್ರೋಲ್ ಬಂಕ್ ಸಮೀಪದ ಹೈವೇ50ರ  ಪ್ಲೈ ಓವರ್ ನಲ್ಲಿ  ಮುಂದೆ ಹೋಗುತ್ತಿದ್ದ ಲಾರಿಯ ಹಿಂಬದಿಗೆ ನಿಯಂತ್ರಣ ತಪ್ಪಿದ  ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಏಳು ಜನರಿಗೆ ಗಾಯವಾಗಿರುವ ಘಟನೆ ಇಂದು ನಸುಕಿನ ಜಾವ 3-45 ಗಂಟೆಗೆ ಜರುಗಿದೆ.                                                                            ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲ್ವಾ ಗ್ರಾಮದ ಕಬ್ಬಲಿಗ ಸಮುದಾಯದ ಕುಟುಂಬದ ಮಹದೇವಮ್ಮ (52), ಮಲ್ಲಪ್ಪ (40)ಮತ್ತು ಶರಣಪ್ಪ (15) ತೀವ್ರಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಗೆ ಕಳುಹಿಸಲಾಗಿದ್ದು ವೀರೇಶ (17), ಸಾಬಮ್ಮ (19), ಮರಿಯಮ್ಮ (35)ಹಾಗೂ ಕಾರಿನ ಚಾಲಕ ಸಿದ್ದು (22) ಗಾಯಗೊಂಡು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದಿದೆ.                                                                     ಘಟನೆ ವಿವರ : ಕೂಲಿ ಕೆಲಸಕ್ಕೆಂದು ಬೆಂಗಳೂರು ಕಡೆಗೆ ಇಂಡಿಕಾ ವಿ2 ಕಾರಿನಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲ್ವಾ ಗ್ರಾಮದಿಂದ  ಹೋಗುತ್ತಿರುವಾಗ್ಗೆ ಕೂಡ್ಲಿಗಿ ಹೊರವಲಯದ ಹೈವೇ 50ರ ಪ್ಲೈ ಓವರ್ ಲ್ಲಿ ಇಂದು ನಸುಕಿನ ಜಾವ 3-45ಗಂಟೆ ಸುಮಾರಿಗೆ ಮುಂದೆ ಹೋಗುತ್ತಿದ್ದ ಲಾರಿಯ ಹಿಂಬದಿಗೆ ಕಾರಿನ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆಸಿದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ತಿಳಿದಿದ್ದು ಘಟನಾ ಸ್ಥಳಕ್ಕೆ ಹೈವೇ ಪೆಟ್ರೋಲಿಂಗ್ ಹಾಗೂ ಕೂಡ್ಲಿಗಿ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ  ಕಾರಿನಲ್ಲಿದ್ದ 7ಜನರಲ್ಲಿ ಹೆಚ್ಚಿನ ಗಾಯವಾದ ಮೂವರನ್ನು ಬಳ್ಳಾರಿಗೆ ಕಳುಹಿಸಲಾಗಿದ್ದು ಉಳಿದ ನಾಲ್ವರು ಕೂಡ್ಲಿಗಿ ಆಸ್ಪತ್ರೇಲಿ ಚಿಕಿತ್ಸೆ ಪಡೆಯುತ್ತಿದ್ದಾರೆ  ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.