ಲಾರಿ ಹಾಗೂ ಅಂಬುಲೆನ್ಸ್ ಡಿಕ್ಕಿ ಓರ್ವನ ಸಾವು

ವಿಜಯಪುರ:ಜು.16:ಲಾರಿ ಹಾಗೂ ಅಂಬುಲೆನ್ಸ್ ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ ಅಂಬುಲೆನ್ಸ್ ನಲ್ಲಿದ್ದ ಓರ್ವ ವ್ಯಕ್ತಿ ಸ್ಥಳದಲ್ಲೇ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯಸಿಂದಗಿ ತಾಲೂಕಿನ ಯರಗಲ್ ಕ್ರಾಸ್ ಬಳಿ ನಡೆದಿದೆ.
ಅಂತರಗಂಗಿ ಗ್ರಾಮದ ಚನ್ನು ಗಾಣಿಗೇರ (27) ಅಸುನೀಗಿದ್ದಾನೆ. ಅಂಬುಲೆನ್ಸ್ ನಲ್ಲಿದ್ದ ನಾಲ್ಕು ಜನರ ಪೈಕಿ ಓರ್ವ ಸ್ಥಳದಲ್ಲಿಯೇ ಮೃತ್ಯು ಆಗಿದ್ದು, ಮೂವರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರು ಗಾಯಾಳುಗಳು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಿಂದಗಿಯಿಂದ ಹಂಚಿನಾಳ ಗ್ರಾಮಕ್ಕೆ ರೋಗಿಯನ್ನು ತರಲು ಹೊರಟಿದ್ದ ವೇಳೆ ಅಪಘಾತ ಸಂಭವಿಸಿದೆ. ಸಿಂದಗಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.