
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 4 :- ಮೇಯಿಸಲು ಹೋಗಿದ್ದ ಕುರಿಹಿಂಡನ್ನು ಮಳೆ ಬರುತ್ತಿದ್ದರಿಂದ ವಾಪಸ್ಸು ಗ್ರಾಮಕ್ಕೆ ಹೊಡೆದುಕೊಂಡು ಬರುತ್ತಿರುವಾಗ್ಗೆ ಹೈವೇ ರಸ್ತೆಯಲ್ಲಿ ಕೂಡ್ಲಿಗಿ ಕಡೆಗೆ ಬರುತ್ತಿದ್ದ ಲಾರಿಯೊಂದು ಕುರಿ ಹಿಂಡಿನ ಮೇಲೆ ಹರಿದ ಪರಿಣಾಮ 40ಕುರಿಗಳು ಹಾಗೂ 5ಮೇಕೆಗಳು ಧಾರುಣವಾಗಿ ಮೃತಪಟ್ಟ ಘಟನೆ ತಾಲೂಕಿನ ಶಿವಪುರ ಸಮೀಪದ ಘಾಟಿನ ಗುಡ್ಡದ ಹತ್ತಿರದ ಹೈವೇ 50ರಲ್ಲಿ ಸೋಮವಾರ ಮಧ್ಯಾಹ್ನ ಜರುಗಿದೆ.
ಶಿವಪುರ ಗೊಲ್ಲರಹಟ್ಟಿಯ ಕೆ ಬಾಲಪ್ಪ ಎಂಬುವವರಿಗೆ ಸೇರಿದ 160ಕುರಿಗಳ ಹಿಂಡಿನಲ್ಲಿ 40ಕುರಿಗಳು 5ಮೇಕೆಗಳು ಲಾರಿ ಹರಿದು ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿವೆ.
ಶಿವಪುರ ಗೊಲ್ಲರಹಟ್ಟಿಯಿಂದ ಸೋಮವಾರ ಬೆಳಿಗ್ಗೆ ಘಾಟಿನಗುಡ್ಡದ ಕಡೆ ಕುರಿಗಳನ್ನು ಮೇಯಿಸಲು ಹೋಗಿದ್ದು ಮಧ್ಯಾಹ್ನ ಮಳೆ ಬರುವುದನ್ನು ಅರಿತು ಮನೆಕಡೆಗೆ ಹೋಗುವುದಾಗಿ ಕುರಿಗಳನ್ನು ಹೊಡೆದುಕೊಂಡು ಹೈವೇ 50ರ ರಸ್ತೆ ಬದಿ ಬರುತ್ತಿರುವಾಗ್ಗೆ ಗುಜರಾತ್ ಮೂಲದ ಲಾರಿಯ ಚಾಲಕ ಲಾರಿಯನ್ನು ಅತಿವೇಗವಾಗಿ ನಡೆಸಿಕೊಂಡು ಕುರಿಹಿಂಡಿನ ಮೇಲೆ ಲಾರಿ ಹರಿಸಿದ ಪರಿಣಾಮ 40ಕುರಿ 5ಮೇಕೆಗಳು ಸ್ಥಳದಲ್ಲೇ ಮೃತಪಟ್ಟಿದ್ದು ಲಾರಿ ರಸ್ತೆ ಬದಿಯ ತಡೆಗೋಡೆಗೂ ತಗುಲಿದೆ ಲಾರಿ ಚಾಲಕ ಘಟನೆ ಜರುಗುತ್ತಿದ್ದಂತೆ ಪರಾರಿಯಾಗಿದ್ದು ಕುರಿಗಳ ಧಾರುಣಾಸಾವು ಕಂಡ ಕುರಿಮಾಲೀಕ ಕಂಬನಿ ಮಿಡಿದಿದ್ದಾನೆ. ಘಟನಾ ಸ್ಥಳಕ್ಕೆ ಕೂಡ್ಲಿಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕುರಿ ಮಾಲೀಕ ಬಾಲಪ್ಪ ನೀಡಿದ ದೂರಿನಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
One attachment • Scanned by Gmail