ಲಾರಿ ಹರಿದು ರಸ್ತೆ ದಾಟುತ್ತಿದ್ದ 15ಕ್ಕೂ ಹೆಚ್ಚು ಕುರಿಗಳು ಸಾವು.

ಕೂಡ್ಲಿಗಿ.ನ.21:- ಮೇಯಲು ಹೋಗಿ ರಸ್ತೆ ದಾಟುತ್ತಿದ್ದ 15 ಕ್ಕೂ ಹೆಚ್ಚು ಕುರಿಗಳ ಮೇಲೆ ಲಾರಿಯೊಂದು ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನು ಕೆಲವು ಕುರಿಗಳು ಗಾಯಗೊಂಡಿರುವ ಘಟನೆ ತಾಲೂಕಿನ ಹುಲಿಕೆರೆ ಕ್ರಾಸ್ ಬಳಿಯ ಹೈವೇ 50ರಲ್ಲಿ ಸಂಜೆ 5ಗಂಟೆ ಸುಮಾರಿಗೆ ಜರುಗಿದೆ. ಅಪಘಾತದಲ್ಲಿ ಸತ್ತ ಕುರಿಗಳು ತಾಲೂಕಿನ ಸಕಲಾಪುರ ಗೊಲ್ಲರಹಟ್ಟಿ ಗ್ರಾಮದವರೆಂದು ಹೇಳಲಾಗುತ್ತಿದ್ದು ಸಂಜೆ 5ಗಂಟೆ ಸುಮಾರಿಗೆ ಮೇಯ್ದ ಕುರಿಗಳು ಗ್ರಾಮದಕಡೆ ಹೋಗಲು ಹೈವೇ ರಸ್ತೆ ದಾಟುತ್ತಿರುವಾಗ ಬೆಂಗಳೂರು ಕಡೆಗೆ ಹೊರಟಿದ್ದ ಲಾರಿ ಚಾಲಕನ ಅತಿವೇಗ ಅಜಾಗರೂಕತೆಯಿಂದ ನಡೆಸಿಕೊಂಡು ಹೋಗಿ ಕುರಿಗಳ ಗುಂಪಿನ ಮೇಲೆ ಲಾರಿ ಹರಿಸಿದ್ದರಿಂದ 15ಕ್ಕೂ ಹೆಚ್ಚು ಕುರಿಗಳ ಮಾಂಸ ಸಮೇತ ರಸ್ತೆಗೆ ಅಂಟಿಕೊಂಡಂತೆ ಸಾವನ್ನಪ್ಪಿವೆ ಇನ್ನು ಕೆಲವು ಕುರಿಗಳು ಗಾಯವಾಗಿವೆ ಎಂದು ತಿಳಿದಿದೆ