ಲಾರಿ ಹರಿದು ರಸ್ತೆ ದಾಟುತ್ತಿದ್ದ 42 ಕುರಿಗಳು ಸಾವು.

ಕೂಡ್ಲಿಗಿ.ನ.22:- ಮೇಯಲು ಹೋಗಿ ರಸ್ತೆ ದಾಟುತ್ತಿದ್ದ 88 ಕುರಿಗಳ ಗುಂಪಿನ ಮೇಲೆ ಲಾರಿಯೊಂದು ಹರಿದು 42 ಕುರಿಗಳು  ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನು ಕೆಲವು ಕುರಿಗಳು ಗಾಯಗೊಂಡಿರುವ  ಘಟನೆ ತಾಲೂಕಿನ ಹುಲಿಕೆರೆ ಕ್ರಾಸ್ ಬಳಿಯ ಹೈವೇ 50ರಲ್ಲಿ ನಿನ್ನೆ  ಸಂಜೆ 5ಗಂಟೆ ಸುಮಾರಿಗೆ ಜರುಗಿದೆ.           ಅಪಘಾತದಲ್ಲಿ ಸತ್ತ ಕುರಿಗಳು ತಾಲೂಕಿನ ಸಕಲಾಪುರ ಗೊಲ್ಲರಹಟ್ಟಿ ಗ್ರಾಮದವರಾಗಿದ್ದು  ನಿನ್ನೆ  ಸಂಜೆ 5ಗಂಟೆ ಸುಮಾರಿಗೆ ಮೇಯ್ದ ಕುರಿಗಳನ್ನು   ಗ್ರಾಮದಕಡೆ ಹೊಡೆದುಕೊಂಡು  ಹೈವೇ ರಸ್ತೆ ದಾಟಿಸುತ್ತಿರುವಾಗ ಬೆಂಗಳೂರು ಕಡೆಗೆ ಹೊರಟಿದ್ದ ಲಾರಿ ಚಾಲಕನ ಅತಿವೇಗ ಅಜಾಗರೂಕತೆಯಿಂದ ನಡೆಸಿಕೊಂಡು ಹೋಗಿ ಕುರಿಗಳ ಗುಂಪಿನ ಮೇಲೆ ಲಾರಿ ಹರಿಸಿದ್ದರಿಂದ 88 ಕುರಿಗಳ ಪೈಕಿ 38ಕುರಿಗಳು ಮತ್ತು 4ಟಗರು ಸೇರಿದಂತೆ 42ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು ಅದರಲ್ಲಿ 20ಕುರಿಗಳ ಮೇಲೆ ಲಾರಿ ಹರಿದ ಪರಿಣಾಮ ರಸ್ತೆಯಲ್ಲೇ ಚಪ್ಪಟೆಯಾಗಿ  ಮಾಂಸ ಸಮೇತ ರಸ್ತೆಗೆ ಅಂಟಿಕೊಂಡಿತ್ತು ಹಾಗೂ 9ಕುರಿಗಳು ಮತ್ತು 1ಮೇಕೆ ತೀವ್ರವಾಗಿ ಗಾಯಗೊಂಡಿವೆ ಸತ್ತ ಕುರಿಗಳ ಆಂದಾಜು ಬೆಲೆ 3ಲಕ್ಷದ 36ಸಾವಿರ ಬೆಲೆ ಬಾಳುತ್ತಿದ್ದವು ಅಪಘಾತ ಪಡಿಸಿದ ಲಾರಿ ಚಾಲಕ ಅಪಘಾತ ಪಡಿಸಿ ಸ್ವಲ್ಪದೂರದಲ್ಲಿ ಲಾರಿ ನಿಲ್ಲಿಸಿ ಪರಾರಿಯಾಗಿದ್ದಾನೆಂದು ಸಕಲಾಪುರದ ಗೊಲ್ಲರಹಟ್ಟಿಯ ಕುರಿಗಾಯಿ ಯುವಕ ಗೊಲ್ಲರ ನಾಗೇಶ ನೀಡಿದ ದೂರಿನಂತೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ  ಪ್ರಕರಣ ದಾಖಲಿಸಿಕೊಂಡಿದ್ದಾರೆ.