ಲಾರಿ ಹರಿದು ನಾಲ್ವರು ಯುವಕರ ದುರ್ಮರಣ

ವಿಜಯಪುರ,ಅ.18-ಲಾರಿ ಹರಿದು ನಾಲ್ವರು ಯುವಕರು ದಾರುಣವಾಗಿ ಅಸುನೀಗಿರುವ ಘಟನೆ ನಗರ ಹೊರಭಾಗದ ಹಿಟ್ನಳ್ಳಿ ಟೋಲ್ ನಾಕಾ ಬಳಿ ಮಂಗಳವಾರ ತಡ ರಾತ್ರಿ ನಡೆದಿದೆ.
ಮೃತರನ್ನು ವಜ್ರಹನುಮಾನ ನಗರದ ಪ್ರವೀಣ ತಂದೆ ಸಂಗನಗೌಡ ಪಾಟೀಲ (31), ಶೀವಾನಂದ ತಂದೆ ಬಸವರಾಜ ಚೌಧರಿ (24), ಈರಣ್ಣ ತಂದೆ ಅಣ್ಣಾರಾವ ಕೋಲ್ಹಾರ (26), ಸುನೀಲ ತಂದೆ ಪ್ರಭು ಖಾನಾಪೂರ ವಯಾ (26) ಎಂದು ಗುರುತಿಸಲಾಗಿದೆ.
ಯುವಕರು ಊಟಕ್ಕೆಂದು ಬೈಕನಲ್ಲಿ ಡಾಬಾವೊಂದಕ್ಕೆ ಹೋಗಿದ್ದರು. ಬೈಕ್ ಸಮೇತ ಹೆದ್ದಾರಿ ಪಕ್ಕಕ್ಕೆ ನಿಂತಾಗ ಲಾರಿ ಹರಿದಿದ್ದು ಸಾವಿಗೀಡಾಗಿದ್ದಾರೆ.
ಘಟನೆ ಬಳಿಕ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸಂಚಾರಿ ಠಾಣೆ ಪೆÇಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಜಯಪುರ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.