ಲಾರಿ ಮಾಲೀಕರ ಸಮಸ್ಯೆಗೆ ಸದಾ ಸ್ಪಂದಿಸುವೆ: ಶಾಸಕ ರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.21: ನಿಮ್ಮ ಯಾವುದೇ ಸಮಸ್ಯೆಗೆ ಸ್ಪಂದಿಸುವೆ. ತಕ್ಷಣ ನಿಮಗೆ ದೊರೆಯುವ ವ್ಯಕ್ತಿ ನಾನು. ನಿಮ್ಮ ಸೇವೆ ಮಾಡುವುದೇ ನನ್ನ ಕೆಲಸ
ಎಂದು ಲಾರಿ ಮಾಲೀಕರ, ಚಾಲಕರಿಗೆ ನಗರ ಬಿಜೆಪಿ ಅಭ್ಯರ್ಥಿ ಸೋಮಶೇಖರ ರೆಡ್ಡಿ ಹೇಳಿದರು.
ಅವರು ಇಂದು ನಗರದ ಲಾರಿ ಟರ್ಮಿನಲ್ ನಲ್ಲಿ ಜಿಲ್ಲಾ ಲಾರಿ ಮಾಲೀಕರ ಸಂಘದ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡುತ್ತಿದ್ದರು.
ಈ ಹಿಂದೆ  ಕೆಲವರಿಂದ ನಿಮಗೆ  ಸಮಸ್ಯೆ ಆಗಿದ್ದು ಗೊತ್ತಿದೆ. ನಿಮಗೆ ತೊಂದರೆ ಕೊಟ್ಟವರು ಈಗ ನಮ್ಮ‌ತಮ್ಮನ ಪಕ್ಷದಲ್ಲಿದ್ದಾರೆ. ಈಗ ನಿಮಗೆ ಏನೇ ಸಮಸ್ಯೆ ಆದರೂ ಸಚಿವ ಶ್ರೀರಾಮುಲು ಮತ್ತು ನಾನು ನಿಮ್ಮ ಬೆಂಬಲಕ್ಕೆ ನಿಲ್ಲುವೆ.
ಈ ಮೊದಲಿನಂತೆ ಸೀರಿಯಲ್ ಪ್ರಕಾರ ಟೋಕನ್ ಪದ್ದತಿ ಜಾರಿಗೆ ತರಲು ಪ್ರಯತ್ನಿಸೋ ಎಂಬ ಭರವಶೆ ನೀಡಿದರು.
ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದವ ನಾನು. ನನ್ನ ಗೆಲ್ಲಿಸಿ ನೀವು ನಿಮ್ಮ ಸಮಸ್ಯೆ ತಿಳಿಸುಲು ಮುಂದಾಗಿ ಅದೇನೆ ಇರಲು ಎದುರಿಸುವೆ ಎಂದರು.
ನಿಮಗೆ ಬೈ ಪಾಸ್ ಬಳಿ ಮೀಸಲಿರುವ ಜಮೀನಿನಲ್ಲಿ ಹೊಸದೊಂದು ಸುಸಜ್ಜಿತ ಲಾರಿ ಟರ್ಮಿನಲ್ ನಿರ್ಮಿಸಲಿದೆಂದರು. 
ಲಾರೀ ಮಾಲೀಕರ ಸಂಘದ ಅಧ್ಯಕ್ಷ ಪೆದ್ದನ್ನ, ಉಪಾಧ್ಯಕ್ಷ ಶ್ರೀನಿವಾಸ್, ವಿಶ್ವನಾಥ್, ಕಾರ್ಯದರ್ಶಿ ಎಂ.ಎನ್. ಬಸವರಾಜ್, ಸಹ ಕಾರ್ಯದರ್ಶಿ ಪಾಂಡುರಂಗ, ಚಾಲಕರ ಸಂಘದ ಅಧ್ಯಕ್ಷ ನಾರಾಯಾಣಸ್ವಾಮಿ, ಮುಖಂಡರಾದ ಸಾದಿಕ್, ಅನಿಲ್ ಕುಮಾರ್, ಎಎಸ್ ವೈ ರಾಮಾಂಜಿನೇಯಲು, ತಿಪ್ಪಯ್ಯ, ಸೋಮಶೇಖರ, ಟಿಬಿಟಿ ಲತೀಪ್, ಗಾಂಧಿ ಕೃಷ್ಣ, ಸೀನ, ಚಂದ್ರಶೇಖರ, ಬಿ.ನಾಗರಾಜ್    ಮೊದಲಾದವರು ಇದ್ದರು.