ಲಾರಿ ಮಾಲೀಕರ ಸಂಘದಲ್ಲಿ ಶೀತಲ ಸಮರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.17: ನಗರದಲ್ಲಿನ ಲಾರೀ ಮಾಲೀಕರ ಸಂಘದಲ್ಲಿ ಈಗ ಎರೆಡು ಗುಂಪುಗಳಾಗಿ ಶೀತಲ ಸಮರ ಆರಂಭಗೊಂಡು ಸಂಘದ ಕಾರ್ಯಚಟುವಟಿಕೆ ಸ್ಥಗಿತಗೊಂಡಿದೆ.
ಕಳೆದ ಒಂದು ವರ್ಷದಿಂದ ಸಂಘ ನಿರ್ಲಪ್ತತೆಯಿಂದ ಕೂಡಿದೆ.
ಈ ಹಿಂದೆ ವೆಂಕಟರಾವ್, ಭಾಸ್ಕರ್ ರೆಡ್ಡಿ, ಮುನ್ನಾ  ಮೊದಲಾದವರು   ಉತ್ತಮವಾಗಿ ನಡೆಸಿಕೊಂಡು ಹೋಗಿದ್ದರು.
ಆದರೆ ಈ ಮಧ್ಯೆ ಲಾರಿಗಳಿಂದ ಹಣ ವಸೂಲಿ ವಿಷಯದಲ್ಲಿ ವಿವಾದ ಉಂಟಾಗಿ, ಎರೆಡು ಗುಂಪುಗಳಾಗಿ ಸಂಘದ ಕಾರ್ಯಚಟುವಟಿಕೆ ಸ್ಥಗಿತಗೊಂಡಂತಾಗಿದೆ.
ಒಂದು ಹೊಸ  ಗುಂಪು ಈಗಿರುವ ಅಧ್ಯಕ್ಷರು ನಿಯಮಗಳ ಪ್ರಕಾರ ನೇಮಕಗೊಂಡಿಲ್ಲವೆಂದು.
ಸಭೆ ಸೇರಿ ಅಧ್ಯಕ್ಷನನ್ನು ಆಯ್ಕೆ ಮಾಡಿಕೊಂಡು ಸಂಘದ ಕಚೇರಿಗೆ ಬೀಗ ಹಾಕಿತ್ತು. 
ಆದರೆ ನಾವು ನಿಯಮಗಳ ಪ್ರಕಾರ ನಡೆಯುತ್ತಿದ್ದೇವೆ ಎಂದು ಅಧ್ಯಕ್ಷ ಪೆದ್ದನ್ನ ನೇತೃತ್ವದಲ್ಲಿನ ಗುಂಪು ಬೀಗ ಹಾಕುದ್ದನ್ನು ತೆರೆದಿದೆ.  ತಮ್ಮ ಮೇಲೆ ದೌರ್ಜನ್ಯ ನಡೆಯುತ್ತದೆಂದು ಪೊಲೀಸರಿಗೆ ದೂರು ನೀಡುವ ಪ್ರಕ್ರಿಯೆ ಸಹ ನಡೆದಿದೆ.
ಬಹುತೇಖ ಅಧಿಕಾರ ಹೊಂದುವ ಸಂಘದ ಗುಂಪು ನಗರದ ಶಾಸಕರ ಕೃಪಾ ಪೋಷಿತವಾಗಿ ನಡೆಯುತ್ತ ಬಂದಿವೆ. ಈಗಿನ ಶಾಸಕ ನಾರಾ ಭರತ್ ರೆಡ್ಡಿ ಈ ಶೀತಲ ಸಮರವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.  
ಈ ಶೀತಲ ಸಮರದಿಂದ ನಗರದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಲಾರಿ ತಂಗುದಾಣದ ನಿರ್ವಹಣೆ ಇಲ್ಲದಂತಾಗಿದೆ.  ಪ್ರಮುಖ ರಸ್ತೆ ಗುಂಡಿ, ಧೂಳಿನಿಂದ ಹಾಳಾಗಿದೆ. ಲಾರಿ‌ಮಾಲೀಕರ ಸಂಘ ಇದ್ದರೂ ಲಾರಿ ಟರ್ಮಿನಲ್‌ ನಿರ್ವಹಣೆ ಮಾತ್ರ ಅಷ್ಟಕ್ಕಷ್ಟೇ ಆಗಿದೆ.