ಲಾರಿ ಮಾಲೀಕರ ಸಂಘಕ್ಕೆ ಚುನಾವಣೆ ನಡೆಸಲು ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.03: ಜಿಲ್ಲಾ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಸಂಘದ ಸದಸ್ಯರು ಸಹಕಾರ ಇಲಾಖೆಯ ಸಂಘ ಸಂಸ್ಥೆಗಳ ನೋದಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ವಿಜಯ ಭಾಸ್ಕರ ರೆಡ್ಡಿ ಅವರು. ಸಂಘದ ಪದಾಧಿಕಾರಿಗಳ ಅವಧಿ ಮುಗಿದಿದೆ. ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಘ ಸಂಸ್ಥೆಗಳ ನೋಂದಣಿ ಅಧಿನಿಯಮದ ಪ್ರಕಾರ. ಸರ್ವ ಸದಸ್ಯರ ಸಭೆ ನಡೆಸಿ ಚುನಾವಣೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಬೇಕು.
ಆದರೆ ಈಗಿರುವ ಸಂಘದ ಪದಾಧಿಕಾರಿಗಳು ಕಾನೂನು ರೀತಿಯಲ್ಲಿ  ಚುನಾವಣೆ ನಡೆಸದೆ. ತಾವೇ ಮುಂದುವರಿಯಲು. ಮತ್ತೊಂದು ಅವಧಿಗೆ ಪದಗ್ರಹಣ ಮಾಡಲು ಸಮಾರಂಭ ಇರುವ ಬಗ್ಗೆ ವಾಟ್ಸಾಪ್ ನಲ್ಲಿ ಮೆಸೇಜ್ ಕಳಿಸಿದ್ದಾರೆ. ಇದು ಅಪರಾಧವಾಗಿದೆ.
ಈ ಹಿಂದೆ ಇದ್ದ ಪದಾಧಿಕಾರಿಗಳ  ಮೇಲೆ ಭ್ರಷ್ಟಾಚಾರದ ಆರೋಪ ಇದೆ. ಅಲ್ಲದೆ ಸಂಘದ ಸದಸ್ಯರಿಗೆ ಅವರ ಮೇಲೆ ಅವಿಶ್ವಾಸವಿದೆ. ಅದಕ್ಕಾಗಿ ನೂತನ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸಬೇಕೆಂದು. ಏನೇ ಆದರೂ ಸ್ಟಾಂಡಿಂಗ್ ಕಮಿಟಿ ಮೂಲಕವೇ ಆಗಬೇಕೆಂದು ಅವರು ಒತ್ತಾಯಿಸಿದ್ದು. ಈ ಬಗ್ಗೆ ಎಸ್ಪಿ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಸದಸ್ಯರುಗಳಾದ ಟಿ.ಪ್ರವೀಣ್, ರಾಮ್ ಕುಮಾರ್, ಸಿ.ರಮೇಶ್, ಗಿರಿಧರ ರೆಡ್ಡಿ, ನೀಲಕಂಠೇಶ್ವರ ನಾಯ್ಡು, ಪ್ರಕಾಶ್, ನಾಗರಾಜ್, ಶ್ರೀಕಾಂತರೆಡ್ಡಿ, ಎಂ.ಡಿ.ಫಯಾಜ್ ಮೊದಲಾದವರು ಇದ್ದರು.