ಲಾರಿ ಮಾಲೀಕರ ನಿರ್ಲಕ್ಷ್ಯಕ್ಕೆ ಅಸಮಾಧಾನ

ದಾವಣಗೆರೆ. ಮೇ.೨೮; ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾರಿ ಮಾಲಿಕರಿಗೆ  ಯಾವುದೇ ಪ್ಯಾಕೇಜ್ ಘೋಷಿಸದೆ ನಿರ್ಲಕ್ಷ್ಯ ವಹಿಸಿರುವುದು ದುರಂತ ಎಂದು ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸ್ ಫೋರ್ಟ್ ಏಜೆಂಟರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ನಮ್ಮ ಸರಕು ವಾಹನಗಳು ದೇಶಾದ್ಯಂತ ಸಂಚರಿಸಿ ಅಗತ್ಯ ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೇವೆಯನ್ನು ನೀಡುತ್ತಿದ್ದೇವೆ . ಆದರೆ ನಾವು ನಮ್ಮ ಜೀವನದ ಹಂಗು ತೊರೆದು ಇಷ್ಟೆಲ್ಲಾ ಸೇವೆ ಸಲ್ಲಿಸಿದರೂ ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಮ್ಮನ್ನು ನಿರ್ಲಕ್ಷಿಸುತ್ತಿರುವುದು ದುರಾದೃಷ್ಟಕರ . ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಜೀವನ ಸಾಗಿಸುವುದೇ ಕಷ್ಟವಾಗಿದ್ದು ಅಂತಹದುದರಲ್ಲಿ ಸಾಲ ಪಾವತಿಸಲು  ಕಷ್ಟವಾಗುತ್ತಿದೆ . ಕಳೆದ ವರ್ಷ 2020 ರಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 68.00 ರೂಗಳಿದ್ದು , ಈ ವರ್ಷ ಡಿಸೆಲ್ ಬೆಲೆ ಪ್ರತಿ ಲೀಟರ್‌ಗೆ ತಲಾ 90.00 ರೂಗಳಾಗಿರುತ್ತದೆ . ವಾಹನಗಳ ಬಿಡಿ ಭಾಗಗಳು ಮತ್ತು ಟೈರ್‌ಗಳ ಬೆಲೆ ಕಳೆದ ವರ್ಷಕ್ಕಿಂತ 15 % ರಿಂದ 20 % ಅಧಿಕವಾಗಿದೆ . ಜೊತೆಗೆ ಟೋಲ್ , ಟ್ಯಾಕ್ಸ್ ತ್ರೈಮಾಸಿಕ ರಸ್ತೆ ತೆರಿಗೆ , ಪರ್ಮಿಟ್ ಇನ್ನು ಹಲವಾರು ತರಹದ ಖರ್ಚುಗಳನ್ನು ಮಾಡಿಕೊಂಡು ವಾಹನಗಳನ್ನು ನಡೆಸುವುದು ದುಸ್ತರವಾಗಿದೆ . ಅದಕ್ಕಾಗಿ ಕೇಂದ್ರದ ಹಣಕಾಸು ಸಚಿವರು ಇದನ್ನು ಪರಿಗಣಿಸಿ ಎನ್ ಬಿಎಫ್ ಸಿ ಕಂಪನಿಗಳಿಗೆ ಸೂಕ್ತ ನಿರ್ದೇಶನ ನೀಡಿ ಕನಿಷ್ಠ ಪಕ್ಷ ಒಂದು ವರ್ಷಕ್ಕೆ ಬಡ್ಡಿರಹಿತ ಸಾಲ ತೆಗೆದುಕೊಳ್ಳಲು ಸೂಚಿಸಬೇಕು ಹಾಗು ಸಾಲ ಮರುಪಾವತಿ ಮಾಡಲು ಲಾರಿ ಮಾಲಿಕರಿಗೆ ಮಾನಸಿಕ ಹಿಂಸೆಯನ್ನು ನೀಡದಂತೆ ತಡೆಯಬೇಕು . ಇತ್ತೀಚಿಗೆ ನಮ್ಮ ರಾಜ್ಯ ಸರ್ಕಾರವು ಸರಕುಸಾರಿಗೆ ಚಾಲಕರಿಗೆ ನಿರ್ಲಕ್ಷಿಸಿರುವುದು ದುರದೃಷ್ಟಕರ . ಆದ್ದರಿಂದ  ಮುಖ್ಯ ಮಂತ್ರಿಗಳು ಆದಷ್ಟು ಬೇಗ ಸರಕು ಸಾರಿಗೆ ಉದ್ಯಮಕ್ಕೆ ಪ್ಯಾಕೇಜನ್ನು ಘೋಷಿಸಬೇಕೆಂದರು.  . ಕೇಂದ್ರ ಸರ್ಕಾರ 2020 ರ ಫೆಬ್ರವರಿಯಿಂದ 30-06-2021 ರವರೆಗೆ ಎಫ್ ಸಿ,ಎಮಿಷನ್ ಹಾಗೂ ಡಿಎಲ್ ,  ಚಾಲ್ತಿಯಲ್ಲಿ ಇದೆ ಎಂದು ಸೂಚಿಸಿದೆ. ಆದೇ ರೀತಿ ಒಂದು ವರ್ಷದ ಅವಧಿಗೆ ಒಂದರಿಂದ ಮೂರು ಲಾರಿ ಇರುವವರಿಗೆ ತೆರಿಗೆಯನ್ನು ಮನ್ನಾ ಮಾಡಬೇಕು. ಸಾರಿಗೆ ಉದ್ಯಮದಿಂದ ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ಪರೋಕ್ಷ ಹಾಗು ಪ್ರತ್ಯಕ್ಷವಾಗಿ ಸಾವಿರಾರು ಕೋಟಿಗಟ್ಟಲೆ ಹಣ ತೆರಿಗೆ ಹಾಗು ಬೇರೆ ರೂಪದಲ್ಲಿ ಸಂಗ್ರಹವಾಗುತ್ತಿದೆ . ಸಾರಿಗೆ ಉದ್ಯಮವು ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪ್ರಮುಖ ಪಾತ್ರವಹಿಸುತ್ತದೆ ಹಾಗು ದೇಶದ ಆರ್ಥಿಕತೆಗೆ ಬೆನ್ನೆಲುಬಾಗಿರುತ್ತದೆ . ಆದರೂ ಸಹ ಉಭಯ ಸರ್ಕಾರಗಳು ಈ ಸಾರಿಗೆ ಉದ್ಯಮಕ್ಕೆ ನಿರ್ಲಕ್ಷ್ಯಸುತ್ತಿರುವುದು ದುರದೃಷ್ಟಕರ . ಆದ್ದರಿಂದ ಉಭಯ ಸರ್ಕಾರಗಳು  ಕೊರೋನ ಲಾಕ್ – ಡೌನ್ ಮುಗಿದ ನಂತರ ನಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲು 3 ತಿಂಗಳ ಟೋಲ್ ರಹಿತ ಸಾರಿಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಕೆ ಮಲ್ಲಿಕಾರ್ಜುನ್,ಮಹಾಂತೇಶ್ ಒಣರೊಟ್ಟಿ,ದಾದಾಪೀರ್,ಮುರುಗೇಶ್,ಖಲೀಂ ಇದ್ದರು.