ಲಾರಿ, ಬೈಕ್ ನಡುವೆ ಡಿಕ್ಕಿ : ಸವಾರ ಸಾವು 

ದಾವಣಗೆರೆ, ಜ.21- ಬೈಕ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹರಿಹರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 4ರ ಚೆಕ್ಪೋಸ್ಟ್ ಬಳಿ  ನಡೆದಿದೆ.ದಾವಣಗೆರೆ ಸಮೀಪದ ಹೊಸ ಕುಂದವಾಡದ ವೀರೇಶ್ (21) ಸಾವನಪ್ಪಿದ ಯುವಕ. ಹರಿಹರಕ್ಕೆ ಬೈಕ್ ಚಲಾಯಿಸುತ್ತಿದ್ದ ವೀರೇಶ್ ತನ್ನ ಸ್ನೇಹಿತನ ಜೊತೆಗೆ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಲಾರಿಯು ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ವೀರೇಶ್ ಸ್ಥಳದಲ್ಲಿ ಸಾವನಪ್ಪಿದ್ದು, ಹಿಂಬದಿ ಸವಾರ ಸಮೀರ್ ಎಂಬ ಯುವಕ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.ಈ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.