ಲಾರಿ-ಬೈಕ್ ಡಿಕ್ಕಿ: ತಂದೆ-ಮಗ ಸ್ಥಳದಲ್ಲೇ ಸಾವು

ಕಲಬುರಗಿ,ಮೇ.18-ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ತಂದೆ-ಮಗ ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರಿಗೆ ಗಾಯಗಳಾದ ಘಟನೆ ನಗರದ ಸುಲ್ತಾನಪುರ ರಿಂಗ್ ರಸ್ತೆಯಲ್ಲಿ ಇಂದು ಮಧ್ಯಾಹ್ನ 12ರ ಸುಮಾರಿಗೆ ನಡೆದಿದೆ.
ಮೃತರನ್ನು ಅಫಜಲಪುರ ತಾಲ್ಲೂಕಿನ ಟಾಕಳಿ ಗ್ರಾಮದ ಮುನೀರ್ ತಂದೆ ಚಾಂದಪಾಶಾ ಮಕಾನದಾರ (35) ಮತ್ತು ಅವರ ಮಗ ಅಮೀರ್ ಮಕಾನದಾರ (6) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಮುನೀರ್ ಪತ್ನಿ ಮಾಶಾ ಮತ್ತು ಎರಡುವರೆ ವರ್ಷದ ಮಗು ಅದ್ನಾನ್ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮುನೀರ್ ಅವರು ಪತ್ನಿ, ಇಬ್ಬರು ಮಕ್ಕಳೊಂದಿಗೆ ಬೈಕ್ ಮೇಲೆ ನಗರದ ಮುಸ್ಲೀಂ ಸಂಘದಿಂದ ಸ್ವಗ್ರಾಮ ಅಫಜಲಪುರ ತಾಲ್ಲೂಕಿನ ಟಾಕಳಿಗೆ ಹೊರಟಿದ್ದರು ಎಂದು ತಿಳಿದುಬಂದಿದೆ.
ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.