ಲಾರಿ ಬೈಕ್ ಗೆ ಡಿಕ್ಕಿ ಸವಾರ ಸಾವು

ಬೆಂಗಳೂರು,ಏ.೧೮-ವೇಗವಾಗಿ ಹೋಗುತ್ತಿದ್ದ ಲಾರಿ ಬೈಕ್ ಗೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟು ಹಿಂಬದಿ ಸವಾರ ಗಾಯಗೊಂಡ ದುರ್ಘಟನೆ ಕೆಆರ್ ಪುರಂನ ಅಯ್ಯಪ್ಪನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಕೆಆರ್ ಪುರಂನ ಸುಂದರ್ ಬಾಬು (೩೦)ಮೃತಪಟ್ಟವರು,ಗಾಯಗೊಂಡ
ಹಿಂಬದಿ ಸವಾರ ಪ್ರೇಮನಾಥ್ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೂಡಿ ಕಡೆಯಿಂದ ಅಯ್ಯಪ್ಪನಗರ ಕಡೆಗೆ ರಾತ್ರಿ ೧೦.೩೦ರ ವೇಳೆ ಬೈಕ್ ನಲ್ಲಿ ಹಿಂದೆ ಪ್ರೇಮನಾಥ್ ನನ್ನು ಕೂರಿಸಿಕೊಂಡು ಖಾಸಗಿ ಕಂಪನಿಯ ನೌಕರ ಸುಂದರ್ ಬಾಬು ಹೋಗುವಾಗ ಅಂಕುರ್ ಡಾಬ ಸಮೀಪ ಲಾರಿ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಕೆಆರ್ ಪುರಂ ಸಂಚಾರ ಪೊಲೀಸರು ಅಪಘಾತಗೊಂಡ ಎರಡೂ ವಾಹನಗಳನ್ನು ಠಾಣೆಗೆ ಸ್ಥಳಾಂತರ ಮಾಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ.