ಲಾರಿ-ಬಸ್ ನಡುವೆ ಡಿಕ್ಕಿ ಚಾಲಕರಿಬ್ಬರ ಸಾವು


ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.22: ಜಿಲ್ಲೆಯ ಕುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ಸರ್ಕಾರಿ ಬಸ್ ಹಾಗೂ ಲಾರಿ ನಡುವೆ ಪರಸ್ಪರ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು ಲಾರಿ ಹಾಗೂ ಬಸ್ ಚಾಲಕರು ಇಬ್ಬರೂ ಸ್ಥಳದಲ್ಲೇ ಮೃತರಾದ ಘಟನೆ ನಡೆದಿದೆ.
ಸೋಮಸಮುದ್ರ ಗ್ರಾಮದ ಹೊರವಲಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಬಳ್ಳಾರಿ ಸಮೀಪದ ಸೋಮಸಮುದ್ರ ಗ್ರಾಮದ ಬಳಿ ನಡೆದ ಈ ಅಪಘಾತ ಕಂಡು ಸ್ಥಳೀಯರು ಆಂತಕಕ್ಕೆ ಒಳಗಾಗಿದ್ದಾರೆ.
ಸೋಮವಾರ ಬೆಳಗಿನ ಜಾವದಲ್ಲಿ ಸರ್ಕಾರಿ ಬಸ್ ಲಾರಿ ಪರಸ್ಪರ ಢಿಕ್ಕಿ ಆಗಿ ಸಂಭವಿಸಿದ ಈ ಭೀಕರ ಅಪಘಾತದಲ್ಲಿ ಸರ್ಕಾರಿ ಬಸ್ಸಿನಲ್ಲಿದ್ದ 30ಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.