ಲಾರಿ ಪಲ್ಟಿ ಓರ್ವ ಸಾವು

ಬೃಹತ್ ಮರದ ದಿಮ್ಮಿಗಳ ಸಾಗಿಸುತ್ತಿದ್ದ ಲಾರಿ ನಾಗರಬಾವಿಯ ನಮ್ಮೂರದಿಣ್ಣೆ ಬಳಿ ಉರುಳಿ ಬಿದ್ದಿರುವುದು.

ಬೆಂಗಳೂರು,ಜು.೨೨- ಲಾರಿ ಪಲ್ಟಿಯಾಗಿ ಅದರಲ್ಲಿದ ಮರದ ದಿಮ್ಮಿಗಳು ಪಕ್ಕದಲ್ಲಿ ಬರುತ್ತಿದ್ದ ೨ ಬೈಕ್?ಗಳ ಮೇಲೆ ಬಿದ್ದು ಓರ್ವ ಮೃತಪಟ್ಟು ಮತ್ತೊಬ್ಬ ಗಾಯಗೊಂಡಿರುವ ದಾರುಣ ಘಟನೆ ಇಂದು ಮುಂಜಾನೆ ನಾಗರಬಾವಿ ರಿಂಗ್ ರಸ್ತೆಯಲ್ಲಿ ನಡೆದಿದೆ.
ತಮಿಳುನಾಡು ಮೂಲದ ಬೈಕ್ ಸವಾರ ಸುಖೇಶ್(೩೫)ಮೃತಪಟ್ಟವರು.ಗಾಯಗೊಂಡ ಡೇವಿಡ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲಗ್ಗೆರೆಯ ಪತ್ನಿಯ ಬಂದಿದ್ದ ಮೃತ ಸುಖೇಶ್ ಮುಂಜಾನೆ ೫.೩೦ರ ವೇಳೆ ನಾಗರಬಾವಿ ರಿಂಗ್ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.
ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ೨೦ಕ್ಕೂ ಹೆಚ್ಚು ಮರದ ದಿಮ್ಮಿಗಳು ಬಿದಿದ್ದು,ಅವುಗಳನ್ನು ಹಾಗೂ ಪಲ್ಟಿಯಾದ ಲಾರಿಯನ್ನು ತೆರವುಗೊಳಿಸಿರುವ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಡಿಸಿಪಿ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಟಿಟಿ ಡಿಕ್ಕಿ ನಾಲ್ವರಿಗೆ ಗಾಯ:
ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಟಿಟಿ ವಾಹನ ಡಿಕ್ಕಿಯಾಗಿದ್ದು, ನಾಲ್ವರಿಗೆ ಗಂಭೀರ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ಮೂವರು ಮಹಿಳಾ ಕಾರ್ಮಿಕರು ಹಾಗೂ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ದಾಬಸ್‌ಪೇಟೆ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದೆ.