ಲಾರಿ ಪಲ್ಟಿ: ಓರ್ವ ಗಂಭೀರ ಗಾಯ


ಹುಬ್ಬಳ್ಳಿ, ಜ 17: ಇಟ್ಟಿಗೆ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿ ಗದಗ ರಸ್ತೆಯಲ್ಲಿ ಇಂದು ನಡೆದಿದೆ.
ನಗರದ ಗದಗ ರಸ್ತೆಯ ಐಟಿಸಿ ಗೋಡೌನ್ ಹತ್ತಿರ ಈ ಘಟನೆ ನಡೆದಿದೆ. ಲಾರಿಯು ಗದಗಗೆ ಇಟ್ಟಿಗೆ ತುಂಬಿಕೊಂಡು ಹೊರಟಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಿಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗಿದೆ.
ಲಾರಿ ಪಲ್ಟಿಯಾದ ಸಂದರ್ಭದಲ್ಲಿ ಲಾರಿ ಮೇಲೆ ಕುಳಿತ ಕೂಲಿ ಕಾರ್ಮಿಕ ಕೆಳಗೆ ಬಿದ್ದಿದ್ದು, ಲಾರಿಯಲ್ಲಿ ತುಂಬಿದ್ದ ಇಟ್ಟಿಗೆಗಳು ಕೂಲಿ ಕಾರ್ಮಿಕನ ಮೇಲೆ ಬಿದ್ದ ಪರಿಣಾಮ ಆತನ ತಲೆಗೆ ಪೆಟ್ಟಾಗಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕೂಡಲೇ ಗಾಯಗೊಂಡವರನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ಕಿಮ್ಸ್ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ.