
ಔರಾದ :ಜು.17: ಕಳೆದ ಮೂರು ದಿನಗಳ ಕೆಳಗೆ ಪಟ್ಟಣದ ಉದಗಿರ ರಸ್ತೆಯ ಹೋಗುವ ಮಾರ್ಗದಲ್ಲಿ ಲಾರಿಯೊಂದು ಕಳುವಾದ ಪ್ರಕರಣ ಜರುಗಿತು . ಇದು ಜಿಲ್ಲೆಯಾದ್ಯಂತ ಭಾರಿ ವೈರಲ್ ಸಹ ಆಗಿತ್ತು .
ಲಾರಿ ಮಾಲೀಕ ಪ್ರಭುಗೌಡ ಸ್ಥಳೀಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಇದಕ್ಕೆ ತಕ್ಕಂತೆ ಹಿರಿಯ ಅಧಿಕಾರಿಗಳಾದ ಎಸ್ಪಿ ಡೇಕ್ಕ ಕಿಶೋರಬಾಬು, ಭಾಲ್ಕಿ ವಿಭಾಗದ ಎಸ್ಪಿ ಪ್ರತ್ವಿಕ್, ಸಿಪಿಐ ರವೀಂದ್ರ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಉಪೇಂದ್ರ ನೇತೃತ್ವದ ತಂಡ ಶುಕ್ರವಾರ ಕಳೆದುಹೋದ ಲಾರಿಯನ್ನು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಹತ್ತಿರ ಲೋಹಾ ಪಟ್ಟಣದಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪೆÇಲೀಸರ ತಂಡ ನಾಂದೇಡ್ ಪಟ್ಟಣದಿಂದ ಲಾರಿಯನ್ನು ಸ್ಥಳೀಯ ಪೆÇಲೀಸ್ ಠಾಣೆಗೆ ತಂದು ನಿಲುಗಡೆ ಮಾಡಿದೆ . ಈ ಕುರಿತು ಸುದ್ದಿ ಹರಡುತ್ತಿದ್ದಂತೆ ಸ್ಥಳೀಯ ಮುಖಂಡರು ಹಾಗೂ ಕರವೇ ಕಾರ್ಯಕರ್ತರು ಪೆÇೀಲಿಸರ ಕಾರ್ಯಕ್ಕೇ ಮೆಚ್ಚುಗೆ ವ್ಯಕ್ತ ಪಡಿಸಿ ಶಾಲು ಹೊದಿಸಿ ಸನ್ಮಾನಿಸಿದರು . ಪೆÇಲೀಸ್ ಪೇದೆಗಳಾದ ವಿಲಾಸ, ನರಸರೇಡ್ಡಿ, ವಿನೋದ್ ಕುಮಾರ್ , ಪ್ರಭುಗೌಡ , ಅನಿಲ್ ದೇವಕತ್ತೇ , ಕಿರಣ, ನರಸಿಂಗ, ಮಹೇಶ, ಅಂಬಾದಾಸ, ನವೀನ ರೆಡ್ಡಿ ಸೇರಿದಂತೆ ಇತರರಿದ್ದರು.