ಲಾರಿ, ನಗದು ದೋಚಿ ಪರಾರಿ

ಕುಣಿಗಲ್, ಮಾ. ೨೦- ಲಾರಿ ಮಾಲೀಕನನ್ನು ಬೆದರಿಸಿ, ಆತನ ಬಳಿ ಇದ್ದ ೩ ಸಾವಿರ ರೂ.ಗಳನ್ನು ದುಷ್ಕರ್ಮಿಗಳು ದೋಚಿಕೊಂಡು ಲಾರಿಯೊಂದಿಗೆ ಪರಾರಿಯಾಗಿರುವ ಘಟನೆ ರಾಜ್ಯ ಹೆದ್ದಾರಿ ೩೩ರ ಚಿಕ್ಕಮಳಲವಾಡಿ ಬಳಿ ನಡೆದಿದೆ.
ತುಮಕೂರಿನ ಬಾಲಾಜಿ ಎಂಬುವರಿಗೆ ಸೇರಿದ ಲಾರಿಯಲ್ಲಿ ಲೋಡ್ ತುಂಬಿಸಿಕೊಂಡು ಮದ್ದೂರಿನಲ್ಲಿ ಇಳಿಸಿ ಹಿಂದಿರುಗುತ್ತಿದ್ದಾಗ ಲಾರಿ ಚಾಲಕ ಹೆಂಜಾರಪ್ಪ ಚಿಕ್ಕಮಾಳಲವಾಡಿ ರಸ್ತೆಯಲ್ಲಿ ಇಬ್ಬರು ಮಲಗಿದ್ದನ್ನು ಕಂಡು ವಿಚಾರಿಸಲು ಹೋದಾಗ ಮಲಗಿದ್ದಂತೆ ನಟಿಸಿದ್ದ ದುಷ್ಕರ್ಮಿಗಳು ಚಾಲಕನಿಗೆ ಥಳಿಸಿ, ಚಾಕು ತೋರಿಸಿ ಬೆದರಿಸಿ ಹಣ ಕಸಿದು ೬.೩೦ ಲಕ್ಷ ರೂ. ಮೌಲ್ಯದ ಲಾರಿಯೊಂದಿಗೆ ಪರಾರಿಯಾಗಿದ್ದಾರೆ.
ಚಾಲಕ ನೀಡಿದ ದೂರಿನ ಮೇರೆಗೆ ಕುಣಿಗಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.