ಲಾರಿ ತಡೆದು ದೋಚಿದ 6 ದರೋಡೆಕೋರರ ಬಂಧನ

ವಿಜಯಪುರ ಏ 19: ದ್ರಾಕ್ಷಿ ಹೇರಿಕೊಂಡು ಬರಲು ಹೋಗುತ್ತಿದ್ದ ವಾಹನವನ್ನು ಉತ್ನಾಳ ಕ್ರಾಸ್ ಬಳಿ ತಡೆದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಲಕ್ಷಾಂತರ ರೂ. ದರೋಡೆ ಮಾಡಿದ ಆರು ಜನ ಆರೋಪಿಗಳನ್ನು ಪೆÇಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಲ್ಲಿಕಾರ್ಜುನ ಮಲ್ಲು ಬಾಳಾಸಾಹೇಬ ಪಾಟೀಲ, ಪ್ರಶಾಂತ ಸಿದ್ರಾಮ ಕೆಂಪವಾಡ, ಸುನೀಲ ವಿಜಯಕುಮಾರ ವಳಸಂಗ, ಅರುಣ ರಮೇಶ ಜಾಧವ, ವಿಜಯಕುಮಾರ ಸಂಗಪ್ಪ ಮುತ್ತಗಿ, ರವಿ ರಾಯಪ್ಪ ಭೈರವಾಡಗಿ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 1.20 ಲಕ್ಷ ರೂ. ನಗದು, ದರೋಡೆ ಕೃತ್ಯಕ್ಕೆ ಬಳಸಿದ ಎರಡು ಕಾರು, ಮೊಬೈಲ್ ಜಪ್ತು ಮಾಡಿಕೊಳ್ಳಲಾಗಿದೆ.
ಕಳೆದ ಎಪ್ರಿಲ್ 7 ರಂದು ಬೆಂಗಳೂರಿನಿಂದ ಜತ್ತ ತಾಲೂಕಿನ ಕಡೆ ದ್ರಾಕ್ಷಿ ಹೇರಿಕೊಂಡು ಬರಲು ಹೋಗುತ್ತಿದ್ದ ವಾಹನವನ್ನು ಉತ್ನಾಳ ಕ್ರಾಸ್ ಬಳಿ ದರೋಡೆಕೋರರು ತಡೆದಿದ್ದರು. ಅಲ್ಲಿ ಮಾರಕ ಅಸ್ತ್ರಗಳನ್ನು ಪ್ರಯೋಗಿಸಿ ಬೆದರಿಕೆ ಹಾಕಿ 3.50 ಲಕ್ಷ ರೂ.ಗಳನ್ನು ದೋಚಿದ್ದರು.
ಎಎಸ್‍ಪಿ ಡಾ.ಶ್ರೀರಾಮ ಅರಸಿದ್ದಿ, ಅಧಿಕಾರಿಗಳಾದ ಅರುಣಕುಮಾರ ಕೋಳೂರ, ಸೋಮಶೇಖರ ಜುಟ್ಟಲ್, ರಾಜು ಮಮದಾಪುರ, ಸಿ.ಬಿ. ಚಿಕ್ಕೋಡಿ, ಎಸ್.ಡಿ.ಯಡಹಳ್ಳಿ ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಈ ಅಧಿಕಾರಿ, ಸಿಬ್ಬಂದಿಗಳ ಕಾರ್ಯವನ್ನು ಜಿಲ್ಲಾ ಪೆÇಲೀಸ್ ಅಧೀಕ್ಷಕ ಅನುಪಮ ಅಗರವಾಲ್ ಶ್ಲಾಘಿಸಿದ್ದಾರೆ.