ಲಾರಿ ತಡೆದು ದರೋಡೆ: 8 ವರ್ಷ ಕಠಿಣ ಶಿಕ್ಷೆ

ಕಲಬುರಗಿ,ಜ.12- ಸಿಮೆಂಟ್ ಲಾರಿಯನ್ನು ನಗರದ ನೃಪತುಂಗ ಬಡಾವಣೆಯ ಕೆಂಬ್ರಿಡ್ಜ ಶಾಲೆಯ ಹತ್ತಿರ ತಡೆದು ದರೋಡೆ ಮಾಡಿದ ಮೂರು ಜನ ಆರೋಪಿಗಳಿಗೆ ಇಲ್ಲಿನ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 8 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ಮತ್ತು ತಲಾ 15 ಸಾವಿರ ರೂ.ಗಳ ದಂಡವನ್ನು ವಿಧಿಸಿದೆ.
ಕಳೆದ ನ,19- 2013ರಲ್ಲಿ ರಾತ್ರಿ ಸಿಮೆಂಟ ಲಾರಿ ಚಾಲಕ ಮಹೇಶ ಲಕ್ಷ್ಮಣ ನಾರಾಯಣಪೂರ ಅವರನ್ನು ತಡೆದು ಆತನನ್ನು ಅಪಹರಣ ಮಾಡಿದ ಮಹಮ್ಮದ ವಸೀಮ, ಸೈಯದ ವಸೀಂ ಹಾಗೂ ಸದರತ ಅಲಿ ಈ ಮೂರು ಜನರು ಸೇರಿ ಆತನ ಮೇಲೆ ಹಲ್ಲೆ ನಡೆಸಿ 4000 ರೂ.ಗಳನ್ನು ಹಾಗೂ ಮೊಬೈಲ್ ಹಾಗೂ ಲಾರಿಯಲ್ಲಿನ ಸಿಮೆಂಟಗಲನ್ನು ದೊಚಿಕೊಂಡು, ಚಾಲಕ ಮಹೇಶನನ್ನು ಸಾವಳಗಿ ಬಳಿ ಬಿಟ್ಟು ಪರಾರಿಯಾಗಿದ್ದರು.
ಈ ಕುರಿತು ಗುಲಬರ್ಗಾ ವಿಶ್ವವಿದ್ಯಾಲಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಅಂದಿನ ಸಿಪಿಐ ಇನಾಮದಾರ ಜೆಎಚ್ ಅವರು, ತನಿಖೆ ಕೈಗೊಂಡು ಆರೋಪಿಗಳ ವಿರುದ್ಧ ದೋಷಾರೋಣಪಣೆ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಗುರುಲಿಂಗ ಶ್ರೀಮಂತ ತೇಲಿ ಅವರು ವಾದ ಮಂಡಿಸಿದ್ದರು.
ವಾದ ಪ್ರತಿವಾದವನ್ನು ಆಲಿಸಿದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ಜಗದೀಶ ವ್ಹಿ.ಎನ್ ಅವರು, ಸಾಕ್ಷ್ಯಾಧಾರಗಳಿಂದ ಆರೋಪ ಸಾಬೀತಾದ ಹಿನ್ನೆಯಲ್ಲಿ ಈ ಮೂರು ಜನ ಆರೋಪಿಗಳಿಗೆ 8 ವರ್ಷಗಳ ಕಾಲ ಜೈಲು ಶಿಕ್ಷೆ, ತಲಾ 15 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ. ದಂಡದ ಹಣದಲ್ಲಿ 25 ಸಾವಿರ ರೂ.ಗಳನ್ನು ಪಿರ್ಯಾದಿಗೆ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.