
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.04: ನಗರದ ಹೆಚ್ ಆರ್ ಸರ್ಕಲ್ ನಲ್ಲಿ ನಿನ್ನೆ ಮಧ್ಯಾಹ್ನ ಲಾರಿಯೊಂದು ಹಿಂಬಂದಿಯಿಂದ ಡಿಕ್ಕಿ ಹೊಡೆದ ಕಾರಣ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ನೆರೆಯ ಆಂದ್ರಪ್ರದೇಶದ ಓಬಳಾಪುರಂ ಗ್ರಾಮದ ಎಸ್. ಮಹೇಶ (24) ಘಟನೆಯಲ್ಲಿ ಮೃತಪಟ್ಡ ಯುವಕನಾಗಿದ್ದಾನೆ.
ಹಿಂಬದಿಯಿಂದ ಬಂದ ಲಾರಿಬೈಕ್ ಸವಾರನ ಮೇಲೆ ಹರಿದು. ಬೈಕ್ ಸವಾರ ಲಾರಿಯಡಿ ಸಿಲುಕಿ ಸಾವನ್ನಪ್ಪಿದ್ದು. ಈ ಬಗ್ಗೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.