ಲಾರಿ ಡಿಕ್ಕಿ ಯುವಕ ಸಾವು ಶಂಕೆ

ರಾಯಚೂರು, ಏ.೧೬-ನಗರದ ಗೋಶಾಲೆ ರಸ್ತೆಯ ಹತ್ತಿರದಲ್ಲಿ ಲಾರಿ ಡಿಕ್ಕಿ ಹೊಡೆದು ಯುವಕ ಮೃತಪಟ್ಟಿರುವ ಘಟನೆ ನಡೆದಿದೆ. ಲಾರಿ ಹರಿದ ಹಿನ್ನಲೆ ಗಂಭೀರ ಗಾಯಗೊಂಡ ಯುವಕ ಕಾಲು ಮುರಿದು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಡೆದಿದ್ದು, ಈ ವೇಳೆ ಹಿಂದಿನಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದ ಯುವಕನ ಮೇಲೆ ಲಾರಿ ಹರಿದಿದೆ. ತೀವ್ರವಾಗಿ ಗಾಯಗೊಂಡಿದ್ದ ಯುವಕ ಹೆಚ್ಚು ರಕ್ತಸ್ರಾವ ಆಗಿದ್ದರಿಂದ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಅಪಘಾತದ ಬಳಿಕ ಚಾಲಕ ಲಾರಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.ಘಟನೆ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ಕೈಗೊಂಡು ಪ್ರಕರಣ ದಾಖಲೆಗಿದೆ ಎನ್ನಲಾಗಿದೆ.