ಲಾರಿ ಡಿಕ್ಕಿ ಬೈಕ್ ಸವಾರ ಸಾವು

ವಿಜಯಪುರ: ಮೇ.5:ಜಿಲ್ಲೆಯ ಚಡಚಣ ತಾಲೂಕಿನ ಧೂಳಖೇಡ ಗ್ರಾಮದ ಬಳಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಬೈಕ್ ಸವಾರ ಮಲಕಾರಿ ಖಂಡಪ್ಪ ತೋರತೆ(33) ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮಹಾರಾಷ್ಟ್ರದ ಟಾಕಳಿಯಿಂದ ಲಾರಿ ಹಾಗೂ ಸೋಲಾಪುರದಿಂದ ಚಣೆಗಾಂವ ಗ್ರಾಮಕ್ಕೆ ಹೊರಟಿದ್ದ ಬೈಕ್ ಪೆಟ್ರೋಲ್ ಬಂಕ್ ಒಳಗೆ ಹೊರಟಾಗ ಅಪಘಾತ ಸಂಭವಿಸಿದೆ. ಝಳಕಿ ಪೆÇೀಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ