ಲಾರಿ ಡಿಕ್ಕಿ: ಬೈಕ್ ಸವಾರ ಸಾವು

ಕಲಬುರಗಿ,ಮೇ.5-ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ಕಪನೂರ ಹತ್ತಿರ ಇಂದು ನಡೆದಿದೆ.
ಮೃತನನ್ನು ವಿಜಯಕುಮಾರ ತಂದೆ ಪುಂಡಲಿಕರಾವ ಎಂದು ಗುರುತಿಸಲಾಗಿದೆ. ಸಂಚಾರಿ-2 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.