ಲಾರಿ ಡಿಕ್ಕಿ – ಡಿಪ್ಲೋಮ ವಿದ್ಯಾರ್ಥಿ ಸೇರಿ ಇಬ್ಬರಿಗೆ ಗಾಯ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಫೆ.12 :- ಕಾಲೇಜ್ ಮುಗಿಸಿಕೊಂಡು ಬರುತ್ತಿದ್ದ ಡಿಪ್ಲೋಮೋ ವಿದ್ಯಾರ್ಥಿಯನ್ನು ಕೂಡ್ಲಿಗಿ ಬೈಕ್ ಸವಾರ ಕರೆದುಕೊಂಡು ಬರುತ್ತಿರುವಾಗ್ಗೆ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಬೈಕಿನಲ್ಲಿದ್ದ ಇಬ್ಬರಿಗೆ ಗಾಯವಾಗಿರುವ ಘಟನೆ ಶನಿವಾರ ಮಧ್ಯಾಹ್ನ ಕೂಡ್ಲಿಗಿ ಹೊರವಲಯದ ಬೆಂಗಳೂರು ರಸ್ತೆಯ ಗೌಡ್ರು ಪೆಟ್ರೋಲ್ ಬಂಕ್ ಹತ್ತಿರದ ಪ್ಲೈ ಓವರ್ ಅಂಡರ್ ಪಾಸ್ ರಸ್ತೆಯ ಸಮೀಪ ಜರುಗಿದೆ.
ತಾಲೂಕಿನ ಹುಲಿಕೆರೆಯ ಕೂಡ್ಲಿಗಿ ಸರ್ಕಾರಿ ಡಿಪ್ಲೋಮೋ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ವರುಣ್ ಕುಮಾರ್ (20) ಹಾಗೂ ಕೂಡ್ಲಿಗಿ ಪಟ್ಟಣದ ಬೈಕ್ ಸವಾರ ಅಬ್ದುಲ್ ರೆಹಮಾನ್ ಇವರುಗಳಿಗೆ ಲಾರಿ ಡಿಕ್ಕಿಯಿಂದ ಎರಡು ಕಾಲುಗಳಿಗೆ ತೀವ್ರ ಪೆಟ್ಟಾಗಿದ್ದು ತಕ್ಷಣ ಅವರನ್ನು ಕೂಡ್ಲಿಗಿ ಸರ್ಕಾರಿ  ಆಸ್ಪತ್ರೆಗೆ ದಾಖಲಿಸಲಾಗಿದೆ
ಪಟ್ಟಣದ ಹೊರವಲಯದಲ್ಲಿರುವ ಡಿಪ್ಲೋಮೋ ಕಾಲೇಜ್ ಮುಗಿಸಿಕೊಂಡು ಮಧ್ಯಾಹ್ನ ಕೂಡ್ಲಿಗಿ ಕಡೆ ನಡೆದುಕೊಂಡು ಬರುತ್ತಿದ್ದ ಕಾಲೇಜ್ ವಿದ್ಯಾರ್ಥಿ ಕೈ ಮಾಡಿದ್ದರಿಂದ ಕೂಡ್ಲಿಗಿ ಕಡೆ ಬರುತ್ತಿದ್ದ  ಬೈಕ್ ಸವಾರ ಅಬ್ದುಲ್ ರೆಹಮಾನ್ ಎಂಬಾತನು   ಕರೆದುಕೊಂಡು ಬರುತ್ತಿರುವಾಗ್ಗೆ ಲಾರಿಯೊಂದು ಬೈಕ್ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಡಿಪ್ಲೋಮೋ ವಿದ್ಯಾರ್ಥಿ ಸೇರಿ ಬೈಕ್ ಸವಾರನ ಕಾಲುಗಳಿಗೆ ತೀವ್ರಗಾಯಗಳಾಗಿರುವ ಘಟನೆ ಪಟ್ಟಣದ ಹೊರವಲಯದ ಪ್ಲೈ ಓವರ್ ಅಂಡರ್ ಬ್ರಿಡ್ಜ್ ಸಮೀಪ ಶನಿವಾರ ಮಧ್ಯಾಹ್ನ ಜರುಗಿತು. ತಕ್ಷಣ ಇವರನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಳು ಡಿಪ್ಲೋಮೋ ವಿದ್ಯಾರ್ಥಿ ವರುಣ್ ಕುಮಾರ ನೀಡಿದ ದೂರಿನಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.