ಲಾರಿ ಚಾಲಕ ಸಾವು

ಕಲಬುರಗಿ,ಡಿ.28-ಸೇಡಂ ಸಿಮೆಂಟ್ ಕಾರ್ಖಾನೆಯಿಂದ ಮುಂಬೈಗೆ ಸಿಮೆಂಟ್ ಲೋಡ್ ಮಾಡಿಕೊಂಡು ಹೋಗುತ್ತಿದ್ದ ಲಾರಿಯೊಂದು ಆಳಂದ ರಸ್ತೆಯ ಬೆಣ್ಣೂರ ಪೆಟ್ರೋಲ್ ಪಂಪ್ ಹತ್ತಿರ ಮರಕ್ಕೆ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತನನ್ನು ಬಸವಂತ ನಾಯಕರ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.