ಲಾರಿ ಚಾಲಕನಿಗೆ 6 ತಿಂಗಳ ಶಿಕ್ಷೆ,ದಂಡ

ವಿಜಯಪುರ:ಎ.6: ಬೈಕ್ ಸವಾರನನ್ನು ಕೊಂದ ಲಾರಿ ಚಾಲಕನಿಗೆ ವಿಜಯಪುರದ 3ನೇ ಅಪರ ನ್ಯಾಯಾಲಯ 6 ತಿಂಗಳು ಶಿಕ್ಷೆ ಹಾಗೂ 6 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕವಲಗುಡ್ಡ ಗ್ರಾಮದ ಯಲ್ಲಪ್ಪ ಶಿವಲಿಂಗ ಅವಳೆ ಶಿಕ್ಷೆಗೊಳಗಾದ ಆರೋಪಿ. ತಿಕೋಟಾಲ್ಲಿ ಇಳಿಜಾರಿನಲ್ಲಿ ಲಾರಿ ನಿಲ್ಲಿಸಿ, ಗೇಯರ್‍ನಲ್ಲಿ ನಿಲ್ಲಿಸಿ, ಹೋಗಿದ್ದ. ಆಗ ಅಲ್ಲಿ ಹೊರಟಿದ್ದ ಬೈಕ್‍ಗೆ ಲಾರಿ ಡಿಕ್ಕಿ ಹೊಡೆದಿದ್ದರಿಂದ ಅದರಲ್ಲಿದ್ದ ಭೀಮಣ್ಣ ಯಡವೆ ಎಂಬಾತ ಮೃತಪಟ್ಟಿದ್ದನು. ತಿಕೋಟಾ ಠಾಣೆ ಪೆÇಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ 3ನೇ ಅಪರ ಸಿವಿಲ್ ನ್ಯಾಯಾಧೀಶ ಮಾದೇಶ ಎಂವಿ, ಪುರಾವೆ ಪರಿಶೀಲಿಸಿ, ಆರೋಪಿಗೆ ಈ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಎಲ್. ಹಳ್ಳೂರ ವಾದ ಮಂಡಿಸಿದ್ದರು.