ಲಾರಿ-ಕಾರು ಡಿಕ್ಕಿ:ಮೂವರಿಗೆ ಗಂಭೀರ ಗಾಯ

ಕಲಬುರಗಿ,ಮೇ.11: ನಗರದ ಹೊಸ ಜೇವರಗಿ ರಸ್ತೆ ರಾಮಮಂದಿರ ವೃತ್ತದಲ್ಲಿ ಇಂದು ನಸುಕಿನಲ್ಲಿ ಲಾರಿ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಂಗಾವತಿ ಮೂಲದ ಹುಸೇನ್ ಪೀರ್ ಖಾಜಾ ಹುಸೇನ್, ಫಾತಿಮಾ ಬೇಗಂ ಹುಸೇನ್ ಪೀರ್ ಮತ್ತು ಖಾದರ್‍ಬಿ ಖಾಜಾಸಾಹೇಬ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಚಾಲಕ ಸೇರಿ ಕಾರಿನಲ್ಲಿದ್ದ ಇತರ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಕಾರಲ್ಲಿದ್ದವರು ಗಂಗಾವತಿಯಿಂದ ಕಲಬುರಗಿ ದರ್ಗಾಕ್ಕೆ ಹೊರಟಿದ್ದರು.ಲಾರಿಯು ಶಹಬಾದ್ ಕಡೆಯಿಂದ ಹೈಕೋರ್ಟ ಕಡೆ ಹೊರಟಿತ್ತು .ಟ್ರಾಫಿಕ್ ಠಾಣೆ 2 ರಲ್ಲಿ ಪ್ರಕರಣ ದಾಖಲಾಗಿದೆ.