ಲಾರಿ ಕಳ್ಳತನ : ಆರೋಪಿಗಳ ಬಂಧನಕ್ಕೆ ಶೋಧ

ಔರಾದ :ಜು.14: ಪಟ್ಟಣದ ಕುಮಾರ್ ಪ್ಯಾಲೇಸ್ ಸನೀಹದ ಸೇತುವೆ ಸಮೀಪದಲ್ಲಿ ನಿಲ್ಲಿಸಿದ ಲಾರಿಯೊಂದು ಕಳ್ಳತನವಾಗಿರುವ ಮಾಹಿತಿ ಬುಧವಾರ ಮುಂಜಾನೆ ಬೆಳಕಿಗೆ ಬಂದಿದೆ.

ಲಾರಿ ಸಂಖ್ಯೆ ಎಪಿ 23 ಡಬ್ಲೂ 6677 ಆಗಿದ್ದು, ಅಂದಾಜು ಎಳು ಲಕ್ಷದ 50ಸಾವಿರ ರೂಗಳದಾಗಿದೆ. ಲಾರಿ ಮಾಲಿಕ ಸ್ಥಳಿಯ ಪಟ್ಟಣದ ನಿವಾಸಿ ಪ್ರಭು ಮಾಣಿಕಗೌಡಾ ಅವರಿಗೆ ಸೇರಿದ ಲಾರಿ ಕಳ್ಳತನವಾಗಿದೆ. ತನ್ನ ಉಪಜೀವನಕ್ಕೆ ನೆರಳಾಗಿರುವ ಲಾರಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಲಾರಿ ಮಾಲಿಕ ಪ್ರಭು ಗೌಡಾ ಅವರು ಕಳೆದ 30 ವರ್ಷಗಳಿಂದ ಇದೇ ವೃತ್ತಿ ಮಾಡಿಕೊಂಡು ಬಂದಿದ್ದು, ನಿರಂತರ ಮಳೆ ಇರುವ ಕಾರಣ ದಿನಾಲು ನಿಲ್ಲಿಸುವ ಸ್ಥಳದಲ್ಲಿಯೇ ಲಾರಿ ನಿಲ್ಲಿಸಿದ್ದಾರೆ. ಆದರೇ ಬುಧವಾರ ಮುಂಜಾನೆ ಎದ್ದು ಲಾರಿ ಕ್ಲೀನ್ ಮಾಡಲು ಹೋದಾಗ ಆ ಸ್ಥಳದಲ್ಲಿ ಲಾರಿ ಕಾಣದೇ ಕಂಗಾಲಾಗಿದ್ದಾರೆ. ಕೂಡಲೇ ಔರಾದ್ ಪೆÇಲೀಸ್ ಠಾಣೆಯಲ್ಲಿ ಕಳ್ಳತನವಾದ ಲಾರಿ ಬೇಗನೇ ಪತ್ತೆಮಾಡಿಕೊಡಬೇಕೆಂದು ನೀಡಿದ ಮನವಿ ಮೇರೆಗೇ ಪಿಎಸ್ ಐ ಉಪೇಂದ್ರ ನೇತ್ರತ್ವದ ತಂಡ ಲಾರಿಯ ಶೋಧನೆಗೆಗಾಗಿ ಬಲೆ ಬೀಸಿದೆ.