ಲಾರಿಯಲ್ಲಿ ಸಾಗಿಸುತ್ತಿದ್ದ ಅಕ್ರಮ ಅಪಾಯಕಾರಿ ಗುಟ್ಕಾ ವಶಕ್ಕೆ

ಬೀದರ್: ಸೆ.14:ಪಿಎಸ್‍ಐ ಉಪೇಂದ್ರ ಕುಮಾರ್ ಅವರ ನೇತೃತ್ವದ ತಂಡವು ಖಚಿತ ಮಾಹಿತಿಯ ಮೇರಿಗೆ ವನಮಾರಪಳ್ಳಿ ಚೆಕ್ ಪೆÇೀಸ್ಟ್ ಬಳಿ ವಾಹನವೊಂದರ ಮೇಲೆ ದಾಳಿ ನಡೆಸಿದ್ದರು.
ಅಶೋಕ್ ಲೀಲ್ಯಾಂಡ್ ವಾಹನವೊಂದು ಹುಮನಾಬಾದದಿಂದ ವನಮಾರಪಳ್ಳಿ ಮಾರ್ಗವಾಗಿ ನೇರ ರಾಜ್ಯವಾದ ಮಹಾರಾಷ್ಟ್ರದ ಕಡೆಗೆ ಸರ್ಕಾರದ ಪರವಾನಿಗೆ ಹಾಗೂ ಯಾವುದೇ ರೀತಿಯ ದಾಖಲಾತಿಗಳಿಲ್ಲದೆ ಅಕ್ರಮವಾಗಿ ಅಪಾಯಕಾರಿ ಗುಟ್ಕಾ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿ ಸುಮಾರು 2544 ಕೆ ಜಿ ಯ ಅಪಾಯಕಾರಿ ಗುಟ್ಕಾ ಸೇರಿ ಅಶೋಕ್ ಲಿಲ್ಯಾಂಡ್ ವಾಹನವನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಶೋಕ್ ಲಿಲ್ಯಾಂಡ್ ವಾಹನದ ಚಾಲಕ ಯೂನುಸಶೇಕ ತಂದೆ ಗಫೂರಶೇಕ ಇವನು ಮಹಾರಾಷ್ಟ್ರದ ಜಾಮಖೇಡ(ಅಹ್ಮದನಗರ)ದವನ್ನು ಎಂದು ತಿಳಿದು ಬಂದಿದ್ದು ಆರೋಪಿಯ ವಿರುದ್ಧ ಕಲಂ 98 ಕೆ.ಪಿ.ಎಕ್ಟ್ ಜೊತೆ 7 ಕೊ ಕಾಯ್ದೆಯಡಿ ಔರಾದ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಸಂಜು ಕುಮಾರ್, ಕೊಟ್ರೇಶ್, ಮಾರುತರೆಡ್ಡಿ, ಸಿದ್ದರಾಮ ಚಲವಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.