ಲಾಯರ್ ನೆರವಿಗಾಗಿ ಸರ್ಕಾರಕ್ಕೆ ಪೀಪಲ್ಸ್ ಲಾಯರ್ಸ್ ಗಿಲ್ಡ್ ಮನವಿ

ಬಳ್ಳಾರಿ ಜೂ 08 : ಕೋವಿಡ್ ಸಂಕಷ್ಟದಲ್ಲಿರುವ ಲಾಯರ್ ಗಳ ಜೀವನಕ್ಕೆ ಸರ್ಕಾರ ಆರ್ಥಿಕ ನೆರವು ನೀಡುವಂತೆ ಪೀಪಲ್ಸ್ ಲಾಯರ್ಸ್ ಗಿಲ್ಡ್ ಮನವಿ‌
ಮಾಡಿದೆ.
ಇಂದು ಈ ಬಗ್ಗೆ ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಗಿಲ್ಡ್ ನ ಸದಸ್ಯರು ಮತ್ತು ಸಂಯೋಜಕ ಹುಸೇನ್ ಭಾಷ ಅವರು.
ಲಾಕ್ ಡೌನ ಅವಧಿಯಲ್ಲಿ ವೃತ್ತಿಯಲ್ಲಿನ 10 ವರ್ಷದ ಒಳಗಿನ ವಕೀಲರಿಗೆ ಪ್ರತಿ ತಿಂಗಳಿಗೆ ಹತ್ತು ಸಾವಿರ ರೂ ಜೀವನ ನಿರ್ವಹಣೆಗಾಗಿ ಸಹಾಯ ಧನ ನೀಡಬೇಕು.
ಕೊರೊನದಿಂದ ಮೃತಪಟ್ಟ ವಕೀಲರ ಕುಟುಂಬಕ್ಕೆಹತ್ತು ಲಕ್ಷ ಪರಿಹಾರ ನೀಡಬೇಕು.
ವಕೀಲರನ್ನು ಸಹ ಕೊರೊನಾ ವಾರಿಯರ್ಸ್‌ ಎಂದು ಪರಗಣಿಸಬೇಕು. ಕಚೇರಿ ಮತ್ತು ವೃತ್ತಿ ಸಂಬಂದಿಸಿದಂತೆ ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ಮನ್ನ ಮಾಡಬೇಕು.
ಮನೆ ಸಾಲ ಮತ್ತು ವಾಹನ ಸಾಲಗಳ ಕಂತುಗಳನ್ನು ಮರುಪಾವತಿಸಲು ಲಾಕ್ಡೌನ್ ಅವಧಿಯಲ್ಲಿ ಮತ್ತು ಲಾಕ್‌ ಡೌನ್ ಮುಗಿದ ಮೂರು ತಿಂಗಳವರೆಗೆ ರಿಯಾಯಿತಿ ನೀಡಬೇಕು ಹಾಗೂ ಬಡ್ಡಿಯನ್ನು ಮನ್ನಾ ಮಾಡಬೇಕು. ಹತ್ತು ವರ್ಷಕ್ಕಿಂತ ಮೇಲೆ ವಕಾಲತ್ತನ್ನು ಮಾಡಿತ್ತಿರುವ ವಕೀಲರಿಗೆ ಯಾವುದೇ ಭದ್ರತೆ ಇಲ್ಲದೆ
ಬಡ್ಡಿರಹಿತ ಎರಡರಿಂದ ಮೂರು ಲಕ್ಷ ರೂಪಾಯಿ ಸಾಲ ಕೂಡಲೇ ಮಂಜೂರು ಮಾಡಬೇಕು. ಕೋವಿಡ್ ನಿಂದ ಮೃತಪಟ್ಟ ವಕೀಲರು, ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಬೇಕು. ಈ ಬೇಡಿಕೆಗಳನ್ನು ಈಡೇರಿಸಬೇಕು ಅನಿವಾರ್ಯ ಆದರೆ ವಕೀಲರು ಒಗ್ಗಟ್ಟಿನ ಮೂಲಕ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದಿದ್ದಾರೆ. ಈ ಸಂದರ್ಭದಲ್ಲಿ
ಗಿಲ್ಡ್ ಸದಸ್ಯರಾದ ಜಿ.ಡಿ ವೆಂಕಟರಾಮ, ವೆಂಕಟೇಶ್ ಹೆಗ್ಗಡೆ, ನೂರ್‌ ಮಹಮ್ಮದ್ ರೋಷನ್‌ವಾಷ, ಚಂದ್ರಣ್ಣ, ಡಿ.ನಾರಯಣ,ಲಿಂಗಪ್ಪ ,ಮೊದಲಾದವರು ಇದ್ದರು