ಲಾಯನ ಕ್ಲಬ್ ವಿಜಯಪುರ ಪರಿವಾರದ ಪದ ಗ್ರಹಣ ಸಮಾರಂಭ

ವಿಜಯಪುರ, ಆ.5-ಲಾಯನ ಕ್ಲಬ್ ವಿಜಯಪುರ ಪರಿವಾರದ ಪದ ಗ್ರಹಣ ಸಮಾರಂಭ ನಗರದ ಗುರುದತ್ತ ಮಂಗಲ ಕಾರ್ಯಾಲಯದಲ್ಲಿ ಜರುಗಿತು.

ಲಾಯನ ಕ್ಲಬ್ ಆಫ್ ವಿಜಯಪುರ ಪರಿವಾರದ ಅಧ್ಯಕ್ಷರು ಹಾಗೂ ಪದಾಧಿಖಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಭಾಗ್ಯಶ್ರೀ ಶಿವಾನಂದ ಪಾಟೀಲ ಮಾತನಾಡಿ, ಬಡವರ ಸೇವೆಯಲ್ಲಿ ಪ್ರತಿಯೊಬ್ಬರು ತೊಡಗಬೇಕು. ಬಡವರಲ್ಲಿ ದೇವರನ್ನು ಕಾಣಬೇಕು. ಹಸಿದವರಿಗೆ ಊಟ ನೀಡಿದರೆ ನಮಗೆ ನಿಜವಾದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು. ಆ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಪರಿವಾರದವರ ಕಾರ್ಯ ಶ್ಲಾಘನೀಯ ಎಂದರು. ಮುಖ್ಯ ಅತಿಥಿಗಳಾಗಿ ಡಾ. ಶಿವಾನಂದ ಕುಬಸದ (ಮುದೋಳ) ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಪದಗ್ರಹಣ ಅಧಿಕಾರಿಗಳಾಗಿ ಆಗಮಿಸಿದ ಲಾಯನ ಮನೋಜ ಮಾನೆಕ, ಸೆಕೆಂಡ್ ವೈಸ್ ಗವರ್ನರ್ ಅವರು ಪ್ರತಿಜ್ಞಾ ವಿಧಿ ಬೋಧಿಸಿ ಅಧಿಕಾರ ಹಸ್ತಾಂತರಿಸಿದರು. 2022-23ನೇ ಸಾಲಿನ ಅಧ್ಯಕ್ಷರನ್ನಾಗಿ ಲಾಯನ್ ಸತ್ಯಕಾಮ.ಆರ್.ಕಟ್ಟಿ ಕಾರ್ಯದರ್ಶಿಗಳನ್ನಾಗಿ ಬಾಬು ಲಮಾಣಿ, ಖಜಾಂಚಿಗಳನ್ನಾಗಿ ಪಾಲು ಚವ್ಹಾಣ, ಜೋನ್ ಚೇರ್‍ಪರ್ಸನ್ ಆಗಿ ಡಾ. ಬಾಬುರಾಜೇಂದ್ರ ನಾಯಕ, ಡಿಸ್ಟಿಕ್ ಚೇರ್‍ಪÀರ್ಸನಗಳನ್ನಾಗಿ ಶರಣುಕುಮಾರ ಮಹೇಂದ್ರ, ಡಾ. ಅಶೊಕ ಜಾಧವ, ಎಸ್.ಎಸ್. ರಾಜಮಾನೆ, ಫಯಾಜ ಕಲಾದಗಿ ಆಯ್ಕೆಯಾದರು.

ಪದಾಧಿಕಾರಿಗಳಾಗಿ ಫಸ್ಟ್ ವೈಸ್‍ಪ್ರಸಿಡೆಂಟ್ ಆಗಿ ಎಂ.ಬಿ.ರಜಪೂತ, ಸೆಕೆಂಡ್ ವೈಸ್ ಪ್ರಸಿಡೆಂಟ್ ಆಗಿ ಶಶಿಕಲಾ ಇಜೇರಿ,ಮೆಂಬರಶೀಪ್ ಚೇರಮನ್‍ರಾಗಿ ಡಾ. ರವಿ ನಾಯಕ, ಟ್ರೇಲ್ ಟ್ವಿಸ್ಟರ್ ಆಗಿ ಪುಷ್ಪಾ ಮಹಾಂತಮಠ, ಟೇಮರ್ ಆಗಿ ಲಲಿತಾ ದೊಡಮನಿ, ಪಿಆರ್‍ಓ ಡಾ.ಬಿ.ಎಂ.ಬಿರಾದಾರ, ಸಹಕಾರ್ಯದರ್ಶಿಯಾಗಿ ಕೆ.ಆರ್.ಲಮಾಣಿ, ಸಹ ಖಜಾಂಚಿಯಾಗಿ ಡಾ. ನಚಿಕೇತ ದೇಸಾಯಿ, ಕಾರ್ಯಕ್ರಮ ಆಯೋಜಕರಾಗಿ ಎ.ಎಸ್.ಕುಲಕರ್ಣಿ, ಮಹಿಳಾ ಪ್ರತಿನಿಧಿಯಾಗಿ ಜಯಶ್ರೀ ಲದ್ವಾ, ನಿರ್ದೇಶಕರುಗಳಾಗಿ ಎಚ್.ಎ.ಕಲಾದಗಿ, ರಾಜೇಶ ಗಾಯಕವಾಡ, ಎಸ್.ಎಸ್.ಗಂಗನಹಳ್ಳಿ, ಸಿ.ಎಸ್. ನಿಂಬಾಳ, ಸಾಧಿಕ ಜಾನ್ವೇಕರ, ಸುನೀಲ ನಾಯಕ, ಚಂದ್ರಶೇಖರ ಜಾಧವ,ಎಸ್.ಐ.ಗದಗಿಮಠ, ಸೋಮಶೇಕರ ರಾಠೋಡ, ಡಾ. ಅಶೋಕ ನಾಯಕ, ರವಿ ಮದ್ದರಕಿ, ಡಾ. ಅಶೋಕ ಬಿರಾದಾರ, ಬಿ.ಎಸ್. ಬಡಿಗೇರ, ಡಾ.ಗಿರೀಶ ಕುಲ್ಲೋಳ್ಳಿ, ಶಿವಾನಂದ ಚಾಳೀಕರ, ಬಿ.ಎಂ.ಸಾಹೇಬ ಆಯ್ಕೆಯಾದರು.

ಸದಸ್ಯರನ್ನಾಗಿ ತಾರಾಸಿಂಗ ದೊಡಮನಿ, ರಾಜಕುಮಾರ ಮಾಲೀಪಾಟೀಲ, ಕುಬಸಿಂಗ್ ಜಾಧವ, ಪ್ರೊ. ಸುಜಾತಾ ಮಕ್ಕಾಳ, ವಿದ್ಯಾ ಕೋಟೆನ್ನವರ, ರಾಜಶೇಖರ ಜೋಗುರ, ಶಾಂತಾ ಉತ್ಲಾಸರ, ರೂಪಾ ಶಡದಾಳೆ, ಸವಿತಾ ಚನವೀರ, ಛಾಯಾ ಮಸಿವಿಯಾರ, ಪ್ರಕಾಶ ಚವ್ಹಾಣ, ಭಾರತಿ ಪಾಟೀಲ ಆಯ್ಕೆಯಾದರು.