ಲಾಯನ್ಸ್ ಕ್ಲಬ್‍ಆಫ್ ಹುಬ್ಬಳ್ಳಿ ಪರಿವಾರದಿಂದ ವಿತರಣೆ

ಹುಬ್ಬಳ್ಳಿ,ಮೇ30: ಲಾಕ್‍ಡೌನ್‍ನಕಷ್ಟದ ಸಮಯದಲ್ಲಿ ಅನೇಕ ಕೂಲಿ ಕೆಲಸಗಾರರಿಗೆ, ಕ್ಷೌರಿಕರಿಗೆ, ಆಟೋಚಾಲಕರಿಗೆ, ಅಲೆಮಾರಿ ಜನಾಂಗದ ಕುಟುಂಬದವರಿಗೆ, ಗೊಂಬೆ ಕುಣಿತ ಕಲಾವಿದರಿಗೆ ಉಪಜೀವನಕ್ಕೆ ತೊಂದರೆಯಾಗುತ್ತಿದ್ದು, ಇದನ್ನು ಮನಗಂಡು ಲಾಯನ್ಸ ಕ್ಲಬ್ ಆಫ್ ಹುಬ್ಬಳ್ಳಿ ಪರಿವಾರದವರು ಲಾಯನ್ಸ ಕ್ಲಬ್ ನ ಸೇವಾ ಕಾರ್ಯಕ್ರಮದ ಅಂಗವಾಗಿ ಅನ್ನದಾನ ಶ್ರೇಷ್ಟದಾನ ಎಂದು ಅರಿತು ಕೆಲಸವಿಲ್ಲದೆ ಅಲೆದಾಡುತ್ತಿರುವ ಬಡಜನರಿಗೆ, ಗೋಪನಕೊಪ್ಪದ, ಮಹಾಲಕ್ಷ್ಮೀ ಬಡಾವಣೆಯ ಶ್ರೀ ಅಲೆಮಾರಿ ಜಾನಪದ ಗೊಂಬೆ ಕುಣಿತ ಕಲಾವಿದರ ಸಂಘದ ಆಯ್ಕೆ ಮಾಡಿದ ಕುಟುಂಬದವರಿಗೆ ಮತ್ತು ಗೋಸ್ವಾಮಿ ಪರಿವಾರದವರಿಗೆ ದಿನಸಿ ಆಹಾರ ಸಾಮಗ್ರಿಗಳ ಕಿಟ್‍ನ್ನು ಮಹಾಲಕ್ಷ್ಮೀ ಬಡಾವಣೆ, ಕೆ.ಇ.ಬಿ ರೋಡ, ಗೋಪನಕೊಪ್ಪದಲ್ಲಿ ಹುಬ್ಬಳ್ಳಿಯಲ್ಲಿ ವಿತರಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು.

ಈ ಸೇವಾ ಕಾರ್ಯದ ಅದ್ಯಕ್ಷತೆಯನ್ನು ಲಾಯನ ಬಿರಬಲ್ ಬಿಶ್ನೋಯಿ ಅಧ್ಯಕ್ಷರು ಲಾಯನ್ಸ ಕ್ಲಬ್ ಅಪ್ ಹುಬ್ಬಳ್ಳಿ ಪರಿವಾರರವರು ವಹಿಸಿದ್ದರು. ಈ ಸಂದರ್ಭದಲ್ಲಿ ಈ ಸೇವಾ ಕಾರ್ಯದ ಚೇರಮನ್ನರಾದ ಮಹೇಂದ್ರ ಸಿಂಘಿ ಮಾಜಿ ಛೇರಮನ್ನ ಸಿದ್ಧಾರೂಡ ಸ್ವಾಮಿ ಮಠ ಟ್ರಸ್ಟ ಕಮೀಟಿ, ಮತ್ತು ಚಾರ್ಟರ ಪ್ರೇಸಿಡೆಂಟ ಲಾಯನ್ಸ ಕ್ಲಬ್ ಅಪ್ ಹುಬ್ಬಳ್ಳಿ ಪರಿವಾರ ಇವರು ದಿನಸಿ ಕಿಟನ್ನು ವಿತರಿಸುವದರ ಮೂಲಕ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು.
ಎ.ಎ.ಖತೀಬ ಆಹಾರ ಇನ್ಸ್‍ಪೆಕ್ಟರ್, ಲಾಯನ್ಸ ಕ್ಲಬ್ ಅಪ್ ಹುಬ್ಬಳ್ಳಿ ಪರಿವಾರದ ಗೌರವ ಕಾರ್ಯದರ್ಶಿಗಳಾದ ಲಾಯನ ಡಾ. ಸಂಜಯ ಗಣೇಶಕರ, ಖಜಾಂಚಿ ಲಾಯನ ಬುಪೇಂದ್ರ ಸಂಘವಿ, ಲಾಯನ ಮೋಹನ ಸುತಾರ, ಲಾಯನ ರಮಣ ಮೂರ್ತಿ, ಸೇವಾ ಕಾರ್ಯದ ವೈಸ್ ಚೇರಮನ್ನರಾದ ಲಾಯನ ಗೌತಮ ಗುಲೇಚ್ಛಾ, ಲಾಯನ ಗೌತಮ ಭಾಪಣಾ, ಲಾಯನ ದಿಲೀಪ ತೆಲಿಸರ, ಲಾಯನ್ ಅಶೋಕ ಟೆಂಗಿನಕಾಯಿ, ಲಾಯನ್ ಪ್ರಕಾಶ ಕವಾಡ, ಲಾಯನ ದಿಲೀಪ ಮುನೋತ, ಶ್ರೇ ಸುಭಾಸ ಡಂಕ ಮತ್ತಿತರರು ಉಪಸ್ಥಿತರಿದ್ದರು.