
ಕೋಲಾರ,ಆ,೧೦- ರೈತರು ಬೆಳದ ಉತ್ಪನ್ನಗಳಿಗೆ ವೈಜ್ಞಾನಿಕವಾಗಿ ಲಾಭದಾಯಕ ಬೆಲೆಯನ್ನು ನಿಗಧಿ ಪಡೆಸ ಬೇಕು, ರೈತರ ಬಳಿ ಹಾಲಿನ ಖರೀದಿ ಒಂದು ಲೀಟರ್‌ಗೆ ಕನಿಷ್ಟ ೫೦ ರೂ ನಿಗಧಿ ಪಡೆಸಿ ಸರ್ಕಾರ ರಿಯಾಯಿತಿ ದರದಲ್ಲಿ ಮಾರಾಟ ಮಾಡ ಬೇಕು, ರೈತರ ಮಕ್ಕಳಿಗೆ ವಿಧ್ಯಾರ್ಥಿ ವೇತನ, ಉಚಿತ ವೈದ್ಯಕೀಯ ಸೌಲಭ್ಯಗಳು ಕಲ್ಪಿಸ ಬೇಕು, ವೃತ್ತಿ ಪರ ಶಿಕ್ಷಣಗಳ ಶುಲ್ಕವನ್ನು ಸರ್ಕಾರವೇ ಭರಿಸುವಂತಾಗ ಬೇಕು, ಕಾರ್ಗಿಲ್ ವಿಜಯೋತ್ಸವವನ್ನು ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆ ಮಾಡ ಬೇಕೆಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ ಆಗ್ರಹ ಪಡೆಸಿದರು, ನಗರದ ಪತ್ರಕರ್ತರ ಭವನದಲ್ಲಿ ಭಾರತೀಯ ಕಿಸಾನ್ ಸಂಘ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ರೈತರ ಬೇಡಿಕೆಗಳಿಗೆ ಅನೇಕ ವರ್ಷಗಳಿಂದ ಹೋರಾಟಗಳನ್ನು ಮಾಡಿ ಕೊಂಡು ಬರಲಾಗುತ್ತಿದೆ. ಹಾಲಿನ ಬೆಲೆಗಿಂತ ನೀರಿನ ಬೆಲೆ ಹೆಚ್ಚಾಗಿದೆ. ಕಿಸಾನ್ ಸನ್ಮಾನ್ ಯೋಜನೆಯಲ್ಲಿ ರೈತರಿಗೆ ಖಾತೆಗೆ ಜಮೆ ಮಾಡುತ್ತಿದ್ದ ೪ ಸಾವಿರ ರೂ ಗಳನ್ನು ಸ್ಥಗಿತಗೊಳಿಸಲಾಗಿದೆ.
ಗೋಹತ್ಯೆ ನಿಷೇಧ ಜಾರಿ ಮಾಡಿದ್ದರು ರಾಜ್ಯ ಸರ್ಕಾರ ಅನುಷ್ಠನಗೊಳಿಸುವಲ್ಲಿ ವಿಫಲವಾಗಿದೆ. ಮಳೆಯ ಪ್ರಮಾಣ ಶೇ ೨೫ರಷ್ಟು ಬಿದ್ದಿಲ್ಲ ಇದರಿಂದ ಬೆಳೆಗಳು ಸಮರ್ಪಕವಾಗಿ ಅಗದೆ ಭಾರಿ ನಷ್ಟಕ್ಕೆ ತುತ್ತಾಗಿದ್ದು ಈ ನಷ್ಟವನ್ನು ಸರ್ಕಾರವು ತುಂಬಿಸಿ ಕೊಡುವಂತಾಗ ಬೇಕೆಂದು ಒತ್ತಾಯಿಸಿದರು,. ಸ್ವಸಹಾಯ ಸಂಘಗಳ ಸಾಲ ತೀರಿಸಲಾಗದೆ ಆತ್ಮಹತ್ಯೆಗಳಾಗುತ್ತಿದೆ ಇವುಗಳಿಗೆ ಕಡಿವಾಣ ಹಾಕಲು ಸರ್ಕಾರವು ಮುಂದಾಗ ಬೇಕು ಇಲ್ಲವಾದರೆ ತೀವ್ರವಾದ ಪ್ರತಿಭಟನೆಯನ್ನು ಎದುರಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು, ನಿವೃತ್ತ ಡಿ.ವೈ.ಎಸ್.ಪಿ. ಶಿವಕುಮಾರ್ ಪಿ. ಮಾತನಾಡಿ ರೈತರ ಸಮಸ್ಯೆಗಳು ಬಗೆಹರಿಯದಿದ್ದಾಗ ಹೋರಾಟಗಳಿಗೆ ಸಂಘಟಿತರಾಗಿ ಸಂಘವನ್ನು ರಚಿಸಿ ಕೊಳ್ಳುವುದು ಅನಿವಾರ್ಯವಾಗಲಿದೆ. ಕೃಷಿ, ತೋಟಗಾರಿಕೆ, ರೇಷ್ಮೆ, ಹೈನುಗಾರಿಗೆಗಳು ರೈತರ ಉದ್ಯಮವಾಗಿದ್ದು ಹಲವಾರು ಸಮಸ್ಯೆಗಳು ಎಡತಾಕುತ್ತಿದೆ.
ಸಮಸ್ಯೆಗಳಿಗೆ ಸ್ಪಂದಿಸ ಬೇಕಾದ ಸರ್ಕಾರಗಳು ಮೂಗಿಗೆ ತುಪ್ಪ ಸವರಿದಂತೆ ಹಾಲಿನ ದರ ೩ ರೂ ಏರಿಕೆ ಮಾಡಿ ಮತ್ತೊಂದು ಕಡೆ ಪಶುಗಳ ಆಹಾರದರ, ವಿದ್ಯುತ್ ದರ, ಔಷಧಿಗಳ ದರವು ಸೇರಿದಂತೆ ಇತರೆ ಅಗತ್ಯವಾದ ವಸ್ತುಗಳ ಏರಿಕೆ ಮಾಡಿದೆ ಎಂದು ಟೀಕಿಸಿದರು. ಜಿಲ್ಲಾಧ್ಯಕ್ಷ ಸುಭ್ರಮಣಿ ಮಾತನಾಡಿ ಕಾಡು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಣೆ ಮಾಡಲು ಸಂಬಂಧ ಪಟ್ಟ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡೆಸಿದರು, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಗೋಪಾಲರೆಡ್ಡಿ ಮಾತನಾಡಿ ಹಾಲಿಗೆ ೩ ರೂ ದರ ಏಕರಿಕೆ ಮಾಡಿದ ಮಾತ್ರಕ್ಕೆ ಸಮಸ್ಯೆ ಬಗೆ ಹರಿಯುವುದಿಲ್ಲ.
ಪಶು ಆಹಾರಗಳಿಗೆ ಸಬ್ಸಿಡಿ ದರದಲ್ಲಿ ವಿತರಿಸ ಬೇಕು, ಬೆಳೆಗಳಿಗೆ ಬೆಂಬಲ ಬೆಲ ಅಗತ್ಯವಿಲ್ಲ ಲಾಭಾದಾಯಕ ಬೆಳೆಗಳನ್ನು ನಿಗಧಿ ಪಡೆಸಲಿ ಎಂದು ಸರ್ಕಾರವನ್ನು ಒತ್ತಾಯಿಸಿದರು, ಕಿಸಾನ್ ಸಂಘದ ಸಂಚಾಲಕ ಅಪ್ಪಾಜಿಗೌಡ ಹಾಗೂ ಜಯಲಕ್ಷಮ್ಮ,ಮಾತನಾಡಿದರು, ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಕೆ. ಗೋಪಾರೆಡ್ಡಿ, ಬಿ.ಎನ್. ಚಿದಾನಂದ, ಚಂಬೆ ನಾರಾಯಣಸ್ವಾಮಿ, ಉಗಣಿ ಆರ್. ನಾರಾಯಣಗೌಡ, ಕೆ. ವೆಂಕಟರವಣಪ್ಪ, ಎಸ್.ವಿ. ಭಾಸ್ಕರ್, ಮುಂತಾದವರು ಭಾಗವಹಿಸಿದ್ದರು,