ಲಾಭದಲ್ಲಿ ಹೊನ್ನಾಳಿ ಅರ್ಬನ್ ಸೊಸೈಟಿ

ಹೊನ್ನಾಳಿ.ಡಿ.೨೯; ಪಟ್ಟಣದ “ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ” 50 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 12ರಷ್ಟು ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಡಾ.ಎಚ್.ಪಿ. ರಾಜ್‌ಕುಮಾರ್ ಹೇಳಿದರು.ಸೊಸೈಟಿಯ 21ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸೊಸೈಟಿಯು ಒಂದು ಕುಟುಂಬದಂತೆ ಕಾರ್ಯನಿರ್ವಹಿಸುತ್ತಿದೆ. ಸಾಲಗಾರರ ಕಾಳಜಿ ಜೊತೆಗೆ ಠೇವಣಿದಾರರ ಹಿತರಕ್ಷಣೆಯೂ ಅಗತ್ಯವಾಗಿದೆ. ಈ ವೇಳೆ ಕೆಲವೊಂದು ಕಠಿಣ ನಿರ್ಧಾರಗಳ ಅನಿವಾರ್ಯತೆ ಇದೆ ಎಂದು ತಿಳಿಸಿದರು.ಸೊಸೈಟಿ 5379 ಸದಸ್ಯರನ್ನು ಹೊಂದಿದ್ದು, 2.40 ಕೋಟಿ ರೂ.ಗಳಷ್ಟು ಶೇರು ಬಂಡವಾಳ ಇದೆ. 25 ಕೋಟಿ ರೂ.ಗಳ ದುಡಿಯುವ ಬಂಡವಾಳವಿದ್ದು, “ಎ” ಗ್ರೇಡ್‌ನಲ್ಲಿದೆ. ಸದಸ್ಯತ್ವ ಮುಂದುವರೆಸಿಕೊಂಡು ಹೋಗಲು ಇಚ್ಛಿಸುವವರು 3000 ರೂ.ಗಳನ್ನು ಪಾವತಿಸಬೇಕಿದೆ ಎಂದು ವಿವರಿಸಿದರು.ನ್ಯಾಮತಿ ಶಾಖೆ ಕಟ್ಟಡಕ್ಕೆ ಮುಂದಾಗಿದ್ದು, ಈ ಬಾರಿಯ ವಿದ್ಯಾರ್ಥಿ ಪುರಸ್ಕಾರವನ್ನು ಮುಂದಿನ ಸಭೆಯಲ್ಲಿ ಮಾಡಲು ತೀರ್ಮಾನಿಸಲಾಗಿದೆ ಎಂದರು.ಸೊಸೈಟಿ ಉಪಾಧ್ಯಕ್ಷ ವೀರೇಶ್, ನಿರ್ದೇಶಕರಾದ ಪ್ರಕಾಶ್, ಜಯರಾವ್, ಹನುಮಂತಪ್ಪ, ಶಿವಮೂರ್ತಿ, ರಾಜಾನಾಯ್ಕ, ಎಚ್.ಬಿ. ಮೋಹನ್, ನಾಗರಾಜ್, ರವಿಕುಮಾರ್, ಬೆಳಗುತ್ತಿ ಬಿ.ಎಚ್. ಉಮೇಶ್, ಪ್ರಸಾದ್, ರೂಪ, ನಾಗರತ್ನ, ಶಾಂತಲಾ, ಕಾರ್ಯದರ್ಶಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.