
ಮಾಲೂರು.ಆ೧೮:ಹಾಲು ಉತ್ಪಾದಕರು ಅಧ್ಯಕ್ಷರು ಕಾರ್ಯದರ್ಶಿಗಳು ಸಿಬ್ಬಂದಿ ಹಾಗೂ ಒಕ್ಕೂಟದ ಆಡಳಿತ ಮಂಡಳಿ ಹಾಗೂ ಅಕಾರಿಗಳು ಸಿಬ್ಬಂದಿಯ ಪರಿಶ್ರಮದಿಂದ ಒಕ್ಕೂಟವು ಲಾಭದಾಯಕವಾಗಿದೆ ಎಂದು ಕೋಚಿಮುಲ್ ಅಧ್ಯಕ್ಷ ಶಾಸಕ ಕೆ.ವೈ. ನಂಜೇಗೌಡ ಹೇಳಿದರು.
ಪಟ್ಟಣದ ಶಿಬಿರ ಕಚೇರಿಯ ಸಭಾಂಗಣದಲ್ಲಿ ಕೋಚಿಮುಲ್ ಹಾಲು ಉತ್ಪಾದಕ ಸಂಘಗಳ ಒಕ್ಕೂಟ ತಾಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು ಮುಖ್ಯ ಕಾರ್ಯನಿರ್ವಾಹಕರುಗಳ ಪ್ರಾದೇಶಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎರಡು ಜಿಲ್ಲೆಗಳಲ್ಲಿಯೂ ೧೯೨೫ ಹಾಲು ಉತ್ಪಾದಕ ಸಹಕಾರ ಸಂಘಗಳು ಒಕ್ಕೂಟದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಹಾಲು ಉತ್ಪಾದಕರ ಹಿತ ಕಾಪಾಡುವುದು ಹಾಲಿನ ಉತ್ಪಾದನೆ ಗುಣಮಟ್ಟವನ್ನು ಹೆಚ್ಚಿಸಲು ಒಕ್ಕೂಟವು ಹಲವು ರೀತಿಯ ಸವಲತ್ತುಗಳನ್ನು ಹಾಲು ಉತ್ಪಾದಕರಿಗೆ ಒದಗಿಸಿದೆ ಒಕ್ಕೂಟವು ಸಹಕಾರ ಸಂಘಗಳು ಉತ್ಪಾದಕರು ಉಳಿಸಿಕೊಳ್ಳಲು ಅವಕಾಶ ನೀಡಿದೆ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು ಕಾರ್ಯದರ್ಶಿಗಳು ಸಿಕ್ಕಂತಹ ಅವಕಾಶವನ್ನು ಬಳಸಿಕೊಂಡು ಹಾಲು ಉತ್ಪಾದಕರಿಗೆ ಒಂದಿಲ್ಲೊಂದು ರೀತಿಯಲ್ಲಿ ಒಕ್ಕೂಟದಿಂದ ಸಹಕಾರ ನೀಡಲಾಗುತ್ತಿದೆ ಅದನ್ನು ತಲುಪಿಸುವ ಕೆಲಸ ಮಾಡಬೇಕು ಹಾಲು ಉತ್ಪಾದನೆ ಹೆಚ್ಚಳ ಗುಣಮಟ್ಟ ಸ್ವಂತ ಕಟ್ಟಡ ನಿರ್ಮಾಣ ಹಾಲು ಉತ್ಪಾದಕರ ಹಾಲಿಗೆ ದರ ಹೆಚ್ಚಳ ರಾಜ್ಯದಲ್ಲಿ ಯಾವ ಒಕ್ಕೂಟಗಳು ನೀಡದ ಹಾಗೆ ನಮ್ಮ ಒಕ್ಕೂಟ ಹಾಲಿನ ದರವನ್ನು ಹೆಚ್ಚಳ ಮಾಡಿ ಹಾಲು ಉತ್ಪಾದಕರಿಗೆ ಹೆಚ್ಚುವರಿ ಹಾಲು ಉತ್ಪಾದಿಸಲು ಸಹಕಾರ ನೀಡಿದೆ ಹಾಲು ಉತ್ಪಾದಕರು ಹಾಗೂ ಸಹಕಾರ ಸಂಘಗಲು ಒಕ್ಕೂಟದ ಆಡಳಿತ ಮಂಡಳಿ ಹಾಗೂ ಅಕಾರಿಗಳು ಸಿಬ್ಬಂದಿಯ ಪರಿಶ್ರಮದಿಂದ ಒಕ್ಕೂಟವು ಲಾಭದಾಯಕವಾಗಿದೆ., ೭೫೦೦೦ ದಿಂದ ಒಂದು ಲಕ್ಷದವರೆಗೆ ಹಾಲಿನ ಉತ್ಪಾದನೆ ಏರಿಕೆಯಾಗಿದೆ ಶೇಕಡ ೯೫ರಷ್ಟು ಹಾಲಿನ ಗುಣಮಟ್ಟ ಇರುವುದರಿಂದ ಹಾಲು ಉತ್ಪಾದಕ ಸಹಕಾರ ಸಂಘಗಳು ತಾಲೂಕಿನಲ್ಲಿ ಲಾಭದಾಯಕವಾಗಿದೆ.
ಹಾಲು ಉತ್ಪಾದಕರಿಗೆ ಸರ್ಕಾರ ನೀಡುವ ಸಹಾಯಧನ ಹಾಗೂ ಒಕ್ಕೂಟ ನೀಡುವ ಹಾಲಿನ ಹೆಚ್ಚಳ ದರವನ್ನು ನೇರವಾಗಿ ರೈತರಿಗೆ ನೀಡಲಾಗುತ್ತಿದೆ ಮುಂದಿನ ದಿನಗಳಲ್ಲಿ ಹಾಲಿನ ದರ ಹೆಚ್ಚಳ ಮಾಡಲು ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುವುದು ಎಂದರು.
ಚಿಕ್ಕಬಳ್ಳಾಪುರದಲ್ಲಿ ನಿರ್ಮಾಣ ಮಾಡಿರುವ ಮೆಗಾ ಡೈರಿಗೆ ೫೫ ಕೋಟಿ ರೂಗಳಿಂದ ೨೨೦ ಕೋಟಿ ರೂಗಳಿಗೆ ಏರಿಕೆ ಮಾಡಲಾಗಿದೆ ೧೮೫ಕೋಟಿ ರೂಗಳ ವೆಚ್ಚದಲ್ಲಿ ಎಂವಿಕೆ ಗೋಲ್ಡನ್ ಡೈರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿತು. ಕೊಚಿಮುಲ್ ಮಹಿಳಾ ನಿರ್ದೇಶಕಿ ಕಾಂತಮ್ಮ ಸೋಮಣ್ಣ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಗೋಪಾಲಮೂರ್ತಿ, ಉಪ ವ್ಯವಸ್ಥಾಪಕ ಶ್ರೀನಿವಾಸಗೌಡ ಮಾಲೂರು ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಲೋಹಿತ್ ಸಹಕಾರಿ ಹಿರಿಯ ಧರಿಣಾ ಕೃಷ್ಣಾರೆಡ್ಡಿ ವಿಸ್ತರಣಾಕಾರಿಗಳಾದ ಆರ್. ನಾರಾಯಣಸ್ವಾಮಿ, ಕರಿಯಪ್ಪ, ಹುಲ್ಲೂರಪ್ಪ,ಮನೋಹರ್ ರೆಡಿ, ಇನ್ನಿತರರು ಹಾಜರಿದ್ದರು.