ಲಾಧಾ ಪಂಚಾಯಿತಿ ಅಧ್ಯಕ್ಷರಾಗಿ ನಾಗಪ್ಪ ಮುಸ್ತಾಪುರ

ಔರಾದ್:ಆ.4: ತಾಲೂಕಿನ ಲಾಧಾ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಈಚೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಎಸ್ಸಿ ಪುರುಷ ಚುನಾಯಿತರಾಗಿದ್ದ, ಮುಸ್ತಾಪೂರ ಗ್ರಾಮದ ಸದಸ್ಯ ನಾಗಪ್ಪ ಮುಸ್ತಾಪುರ ನೂತನ ಅಧ್ಯಕ್ಷರಾದರೇ, ಸಾಮಾನ್ಯ ಮಹಿಳೆ, ಚುನಾಯಿತರಾಗಿದ್ದ, ಲಾಧಾ ಗ್ರಾಮದ ಸದಸ್ಯೆ ಅಂಬಿಕಾ ರಾಜಕುಮಾರ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಒಟ್ಟು 15 ಸದಸ್ಯರು ಹೊಂದಿದ್ದ, ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಗಪ್ಪ ಮುಸ್ತಾಪುರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅಂಬಿಕಾ ರಾಜಕುಮಾರ ನಾಮಪತ್ರ ಸಲ್ಲಿಸಿದ್ದು, ನಾಗಪ್ಪ ಮುಸ್ತಾಪುರ 15 ಮತಗಳ ಪೈಕಿ 10 ಮತಗಳು ಪಡೆದು ಆದ್ಯಕ್ಷರಾದರೇ, ಅಂಬಿಕಾ ರಾಜಕುಮಾರ 15 ಮತಗಳ ಪೈಕಿ 9 ಮತಗಳು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ತಹಸೀಲ್ದಾರ ಮಲ್ಲಶೆಟ್ಟಿ ಚಿದ್ರೆ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪಿಡಿಒ ಸಂದೀಪ ಕುಲಕರ್ಣಿ ಸಾಥ್ ನೀಡಿದರು.
ಪ್ರಮುಖರಾದ ಮಹಾದೇವ ಮಿಠಾರೆ, ಶಿವಕುಮಾರ ಬಿರಾದಾರ, ಪ್ರದೀಪ ಮಿಠಾರೆ, ಧನರಾಜ ಮುಸ್ತಾಪುರ, ಸತೀಶ ವಗ್ಗೆ, ರೇಣುಕಾ ಎವನ್, ಬೀರಪ್ಪ, ರಾಜಕುಮಾರ ಬಿರಾದಾರ,ದೇವಿದಾಸ, ಶರಣಬಸಪ್ಪ ಮುಸ್ತಾಪುರ ಸೇರಿದಂತೆ ಅನೇಕರಿದ್ದರು.