ಲಾಡ ಚಿಂಚೋಳಿ ಗ್ರಾಮಕ್ಕೆ ಎಲ್ಲ ಸೌಲಭ್ಯ: ಶಾಸಕ ಸುಭಾಷ್ ಆರ್ ಗುತ್ತೇದಾರ

ಕಲಬುರಗಿ:ಜು.27:ಆಳಂದ ತಾಲೂಕಿನ ಆಯ್ದ ಗ್ರಾಮದ ಕೆಲವೊಂದು ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಯೋಜನೆಯನ್ನು ಪರಿಚಯಿಸಿ ಗ್ರಾಮೀಣ ಭಾಗದ ಮಕ್ಕಳಿಗೆ ಡಿಜಿಟಲ್ ಆಧಾರಿತ ಶಿಕ್ಷಣ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.

ಮಂಗಳವಾರ ಆಳಂದ ತಾಲೂಕಿನ ಲಾಡಚಿಂಚೋಳಿ ಗ್ರಾಮದಲ್ಲಿ 2019-20, 2021-22ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಮಂಜೂರಾದ ರೂ. 50.00 ಲಕ್ಷಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 5 ಹೆಚ್ಚುವರಿ ಕೊಠಡಿಗಳ ನಿರ್ಮಾಣ, ರೂ. 10.00 ಲಕ್ಷಗಳ ಅಂಗನವಾಡಿ ಕಟ್ಟಡಕ್ಕೆ ತಡೆಗೋಡೆ, ರೂ. 50.60 ಲಕ್ಷಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 3 ತರಗತಿ ಕೋಣೆ ಹಾಗೂ ತಡೆ ಗೋಡೆ ಮತ್ತು ಶಿಕ್ಷಣ ಇಲಾಖೆಯಿಂದ ಮಂಜೂರಾದ 1 ಕೋಣೆಯ ಕಾಮಗಾರಿಗಳ ಕಟ್ಟಡಗಳನ್ನು ಉದ್ಘಾಟಿಸಿ ಶಾಸಕ ಸುಭಾಷ್ ಆರ್ ಗುತ್ತೇದಾರ ಮಾತನಾಡಿದರು.

ನಗರ ಮತ್ತು ಗ್ರಾಮೀಣ ಎಂಬ ಮನೋಭಾವ ವಿದ್ಯಾರ್ಥಿಗಳಲ್ಲಿ ಹೋಗಲಾಡಿಸಲು ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಲಾಗುತ್ತಿದೆ. ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ ಇದಕ್ಕಾಗಿ ಹೆಚ್ಚಿನ ಅನುದಾನವೂ ಮೀಸಲಿಟ್ಟಿದ್ದೇನೆ ಎಂದು ನುಡಿದರು.

ಈ ಸಂದರ್ಭದಲ್ಲಿ ಜೆಸ್ಕಾಂ ನಿರ್ದೇಶಕ ವೀರಣ್ಣ ಮಂಗಾಣಿ ಗ್ರಾ.ಪಂ ಅಧ್ಯಕ್ಷೆ ಶೋಭಾ ಚಂದ್ರಕಾಂತ ಮಂಗಾಣಿ, ಕೆಎಂಎಫ್ ನಿರ್ದೇಶಕ ಚಂದ್ರಕಾಂತ ಭೂಸನೂರ, ಮುಖಂಡರಾದ ಮಲ್ಲಣ್ಣ ನಾಗೂರೆ, ಬಸವರಾಜ ಬಿರಾದಾರ, ಶಿವಾನಂದ ಪಾಟೀಲ, ಪ್ರಭುಲಿಂಗ ಹುಲಿ, ಶಿವಶರಣಪ್ಪ ನೆಲ್ಲೂರ, ಅಶೋಕ ಗುತ್ತೇದಾರ, ಕ್ಷೇತ್ರ ಶಿಕ್ಷಾಣಾಧಿಕಾರಿ ಚಿತ್ರಶೇಖರ ದೇಗಲಮಡಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗುರುದೇವ ಕಳಸ್ಕರ, ಕಿರಿಯ ಅಭಿಯಂತರ ಶರಣಯ್ಯ ಹಿರೇಮಠ, ಪಂಚಾಯತ ರಾಜ ಇಂಜಿನಿಯರಿಂಗ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನಾಗಮೂರ್ತಿ, ಕಿರಿಯ ಅಭಿಯಂತರ ಲಿಂಗರಾಜ, ಮೋನಪ್ಪ, ಬಾಬುರಾವ ಘೋಡ್ಕೆ ಸೇರಿದಂತೆ ಶಾಲೆಯ ಮುಖ್ಯ ಗುರುಗಳು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.