ಲಾಡ್ ಪ್ರಚಾರಕ್ಕೆ ಉತ್ತಮ ಸ್ಪಂದನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.24: ಮಾಜಿ ಶಾಸಕ, ನಗರದ ಜೆಡಿಎಸ್ ಅಭ್ಯರ್ಥಿ ಅನಿಲ್ ಲಾಡ್ ಅವರು ನಿನ್ನೆಯಿಂದ ನಗರದಲ್ಲಿ ಪ್ರಚಾರ ಆರಂಭಿಸಿದ್ದು ಜನರಿಂದ ಉತ್ತಮ ಸ್ಪಂದನೆ ದೊರೆತಿದೆ.
ನಗರದ ಮೇದಾರ ಕೇತಯ್ಯ ನಗರ, ತಾಳೂರು ರಸ್ತೆ ಮೊದಲಾದ ಪ್ರದೇಶಗಳಲ್ಲಿ ಲಾಡ್ ನಡೆಸಿದ ಪ್ರಚಾರ ಸಭೆಯಲ್ಲಿ ನೂರಾರು ಜನ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಜನರನಗನು ಉದ್ದೇಶಿಸಿ ಮಾತನಾಡಿದ ಲಾಡ್ ತಾವು ಶಾಸಕರಾಗಿದ್ದಾಗ ನಿಮಗೆ ನೀರಿನ ಸಮಸ್ಯೆಯಾಗಬಾರದೆಂದು ಪ್ರತಿ ವಾರ್ಡಿನಲ್ಲೂ ಬೋರ್ ಕೊರೆಸಿ ಬಳಕೆ ನೀರಿನ ವ್ಯವಸ್ಥೆ ಮಾಡಿತ್ತು‌ ನಿಮ್ಮ ಯಾವುದೇ ಸಮಸ್ಯೆಗೆ ಸ್ಪಂದಿಸುವ ನನಗೆ ಮತ ನೀಡಿ ಎಂದರು.
ಪಕ್ಷದ ಜಿಲ್ಲಾ ಅಧ್ಯಕ್ಷ ಸೋಮಲಿಂಗನಗೌಡ ಮೊದಲಾದ ಮುಖಂಡರು ಇದ್ದರು.