ಲಾಡ್ಲೇಮಶ್ಯಾಕ ಅವರು 673ವರ್ಷ ಬದುಕಿ ಬಾಳಿದ್ದಾರೆ:ಹಿರೂರಶ್ರೀ

ತಾಳಿಕೋಟೆ :ಜ.19: ವಿಶ್ವದ ಗುರು ಆಗಿರತಕ್ಕಂತಹ 14ನೇ ಶತಮಾನದಿಂದ ಏಷ್ಟೋ ಸಾವಿರ ಕೀಲೋ ಮೀಟರ್ ಕ್ರಮಿಸಿದ ಅನಸಾರಿ ಅಲ್ಲಾಹುದ್ದೀನ ಲಾಡ್ಲೇಮಶ್ಯಾಕ ಅವರ ಕುರಿತು ಕವಿ ನಿಕಿಚನ್ ಎನ್ನುವ ಕವಿ ಬರೆದಂತೆ ಕರ್ನಾಟಕದಲ್ಲಿ ಲಾಡ್ಲೇಮಶ್ಯಾಕ ಅವರು 673 ವರ್ಷ ಬಧುಕಿ ಬಾಳಿದ್ದಾರೆಂದು ಹಿರೂರ ಅನ್ನದಾನೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಜಯಸಿದ್ದೇಶ್ವರ ಮಹಾ ಸ್ವಾಮಿಗಳು ನುಡಿದರು.
ಗುರುವಾರರಂದು ಕನ್ನಡ ಜಾಪದ ಪರಿಷತ್ ವಿಜಯಪುರ ಜಿಲ್ಲಾ ಘಟಕ ಹಾಗೂ ಹಜರತ್ ಲಾಡ್ಲೇಮಶ್ಯಾಕ ದರ್ಗಾ ಕಮಿಟಿ ಮೂಕೀಹಾಳ ಸಹಯೋಗದಲ್ಲಿ ಲಾಡ್ಲೇಮಶ್ಯಾಕ ದರ್ಗಾ ಉರುಸು ಅಂಗವಾಗಿ ಜಿಲ್ಲಾ ಮಟ್ಟದ ಜಾನಪದ ಸಮಾವೇಶದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಶ್ರೀಗಳು ಅದ್ಭುತ್ ಶಕ್ತಿಯನ್ನು ಪಡೆದವರು ಲಾಡ್ಲೇಮಶ್ಯಾಕ ಅವರು ಯಂಕಂಚಿಯಿಂದ ಪ್ರಯಾಣ ಬೆಳೆಸಿದ ಅವರು ಈ ಭಾಗಕ್ಕೆ ಆಗಮಿಸಿದ್ದಾರೆಂದು ಹೇಳಲಾಗುತ್ತಿದೆ ಲಾಡ್ಲೇಮಶ್ಯಾಕ ಅವರ ದರ್ಗಾಗಳು 497ಕ್ಕೂ ಮಿಕ್ಕಿ ಇವೆ ಎಂದರು. ಈ ಎಲ್ಲ ದರ್ಗಾಗಳಲ್ಲಿ ಲಾಡ್ಲೇಮಶ್ಯಾಕ ಅವರು ಇದ್ದಾರೆಂದೇ ಜಾತ್ರೆ, ಉರುಸು ಅಂತಹ ಉತ್ಸವಗಳು ನೆರವೇರುತ್ತಿರುವದು ಕಾಣುತ್ತಲಿವೆ ಎಂದು ಹೇಳಿದ ಶ್ರೀಗಳು ಚಿಕ್ಕ ಕಥೆಯೊಂದನ್ನು ಹೇಳಿ ಪ್ರತಿವರ್ಷ ಮೂಕೀಹಾಳ ದರ್ಗಾದ ಈ ಉರುಸನ್ನು ಆಚರಿಸಿಕೊಂಡು ಬರಲಾಗುತ್ತಿರುವ ಈ ಕಮಿಟಿಯ ಅಧ್ಯಕ್ಷರಾಗಿ ಕೆ.ಎಚ್.ಪಾಟೀಲ ಅವರು ಯಾವುದೇ ಬೇಧ ಭಾವವಿಲ್ಲದೇ ಜನಬೆಂಬಲದೊಂದಿಗೆ ಸೇವಾ ಕಾರ್ಯಕ್ಕೆ ಮುಂದಾಗಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನಮೇಚ್ಚುಗೆಗೆ ಪಾತ್ರರಾಗುತ್ತಿದ್ದಾರೆಂದರು.
ಇನ್ನೋರ್ವ ಸಮಾವೇಶವನ್ನು ಗೋಧಿ ಹುಲ್ಲಿನ ಸೂಡ್ ಕಟ್ಟುವ ಮೂಲಕ ಉದ್ಘಾಟಿಸಿದ ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಮಾತನಾಡಿ ಮೂಕೀಹಾಳ ಲಾಡ್ಲೇಮಶ್ಯಾಕ ದರ್ಗಾದ ಉರುಸಿನಲ್ಲಿ ಸೌಹಾರ್ದತೆ ಎಂಬುದು ಕಾಣುತ್ತಲಿದೆ ಅಂತಹ ಬಾಂದವ್ಯ ಬೆಸೆಯುವ ಕಾರ್ಯ ಕೆ.ಎಚ್.ಪಾಟೀಲ ಅವರು ಮಾಡಿದ್ದಾರೆಂದರು. ಪ್ರತಿ ವರ್ಷ ಈ ದರ್ಗಾದಲ್ಲಿ ಮಾನವ ಏಕತಾ ಸಮಾವೇಶವನ್ನು ಹಮ್ಮಿಕೊಂಡು ಸಾಗುತ್ತಿರುವದಲ್ಲದೇ ಶರಣರ ಸಂತರ, ಬುದ್ದಿ ಜೀವಿಗಳ, ಜ್ಞಾನವಂತರ, ವಿಜ್ಞಾನಿಗಳನ್ನು ಕರೆಯಿಸಿ ಎಲ್ಲರಿಗೂ ಜ್ಞಾನ ಮೂಡಿಸುತ್ತಾ ಸಾಗಿರುವದು ಗುಣಗಾನಮಯವಾಗಿದೆ ಎಂದ ಪಾಟೀಲರು, ನಾವು ಕೂಡಾ ಅವರೊಂದಿಗೆ ಶಕ್ತಿಯಾಗಿ ಸಹಕಾರಿಯಾಗಿ ಕಾರ್ಯ ಮಾಡಲು ಮುಂದಾಗಬೇಕೆಂದ ಅವರು ಮುಂದಿನ ದಿನಮಾನದಲ್ಲಿ ಕೆ.ಎಚ್.ಪಾಟೀಲರ ಅಪೇಕ್ಷೆಯಂತೆ ಅನುದಾನವನ್ನು ನೀಡುವ ಕಾರ್ಯಕ್ಕೆ ಪ್ರಯತ್ನಿಸುತ್ತೇನೆಂದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಲಿಂಗದಳ್ಳಿ ಶಿಕ್ಷಕರಾದ ಎ.ಎಂ.ಮೂಲಿಮನಿ ಅವರು ಮಾತನಾಡಿ ಕನ್ನಡ ನಾಡಿನ ನಿಧಿ ಎನ್ನುವದು ಜಾನಪದದಲ್ಲಿ ಅಡಗಿದೆ ಭವ್ಯವಾದ ಸಾರ್ಥಕ ಕಾರ್ಯಕ್ರಮ ಇದಾಗಿದೆ ಎಂದರು. ಇಂತಹ ಕಾರ್ಯಕ್ರಮವನ್ನು ಏರ್ಪಡಿಸುತ್ತಾ ಸಾಗಿಬಂದ ಲಾಡ್ಲೇಮಶ್ಯಾಕ ದರ್ಗಾ ಅಧ್ಯಕ್ಷರ ಹಾಗೂ ಅವರ ಸಂಘಟಿಕರ ಸೇವಾ ಕಾರ್ಯ ಮಹತ್ವದ್ದಾಗಿದೆ ಎಂದ ಅವರು ನಿಸಿಮಾ ಸೋಸಿಯಲ್ ಮೀಡಿಯಾ ವೈಭವದಲ್ಲಿ ಎಲ್ಲದರಲ್ಲಿಯೂ ಈ ಹಿಂದೆ ಮಾನವನ ಜನ್ಮದಿಂದ ಮರಣದ ವರೆಗೂ ಸೃಷ್ಠಿಯಾಗುವಂತಹ ಕಲೆ ಜಾನಪದದಲ್ಲಿ ಅಡಗಿದೆ ಒಟ್ಟಾರೆ ಮಾನವನ ಜೀವನಪ್ರಾಯವೇ ಆದರ್ಶವಾಗಿದೆ ಜಾನಪದ ಸಾಹಿತ್ಯ ಜಾನಪದ ಹಾಡುಗಳು, ಒಗಟುಗಳ ಕುರಿತು ಹಾಗೂ ನಂದಿಕೋಲು, ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ದೆ, ಇವು ಜಾನಪದ ಸಂಬಂದಿತ ಕ್ರೀಡೆಗಳಾಗಿವೆ ಜಾನಪದ ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಉಳಿದಿರುವದು ಸಂತಸದ ಸಂಗತಿಯಾಗಿದೆ ಎಂದರು.
ಇನ್ನೋರ್ವ ಅ.ಭಾ.ವ.ಸಾ.ಪರಿಷತ್ ಅಧ್ಯಕ್ಷ ಮಹಾಂತೇಶ ಮುರಾಳ ಅವರು ಮಾತನಾಡಿ ಜನಪದ ಕಲರವ ಎದ್ದು ಕಾಣುತ್ತಲಿದೆ ಎಲ್ಲ ಜನಪದ ಕಲೆ ಇಂದು ಪ್ರದರ್ಶಿಸಲಾಗಿದೆ ಇಲ್ಲಿಯ ಲಾಡ್ಲೇಮಶ್ಯಾಕ ದರ್ಗಾದ ಉರುಸು ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವ ಇವು ಭಾವೈಕ್ಯತೆಯ ಸಂಖ್ಯೇತವಾಗಿದ್ದು ಎಲ್ಲರನ್ನು ಸನ್ಮಾರ್ಗಕ್ಕೆ ಕೊಂಡೊಯುವಂತವುಗಳಾಗಿವೆ ಇದಕ್ಕೆ ಸ್ಪೂರ್ತಿದಾಯಕರು ಜಾತ್ರಾ ಕಮಿಟಿ ಅಧ್ಯಕ್ಷ ಕೆ.ಎಚ್.ಪಾಟೀಲರಾಗಿದ್ದು ಅವರ ಸೇವಾ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಮಾತನಾಡಿದರು.
ಕನ್ನಡ ಜಾನಪದ ಪರಿಷತ್‍ನ ಜಿಲ್ಲಾ ಅಧ್ಯಕ್ಷ ಬಾಳನಗೌಡ ಪಾಟೀಲ ಅವರು ಪ್ರಾಸ್ಥಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕಲೆಯನ್ನು ಪ್ರದರ್ಶಿಸಿದ ಕಲಾಕಾರರಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.
ಲಾಡ್ಲೇಮಶ್ಯಾಕ ದರ್ಗಾ ಕಮಿಟಿ ಅಧ್ಯಕ್ಷ ಕೆ.ಎಚ್.ಪಾಟೀಲ, ಶಿಕ್ಷಕಿ ಶ್ರೀಮತಿ ಎಸ್.ಎಚ್.ಪಾಟೀಲ, ಎ.ಆರ್.ಮುಲ್ಲಾ, ದೇವೇಂದ್ರ ಗೋನಾಳ, ಬಿ.ಎಸ್.ಇಸಾಂಪೂರ, ಕೆ.ಆರ್.ಹಳ್ಳೂರ, ರಾಜುಗೌಡ ಪಾಟೀಲ, ಮೌಲಾಸಾಬ ಜಾಗೀರದಾರ, ನಾಗರಾಜ ನಾಡಗೌಡ, ಗೀರಿಶ ಕಂಭಾರ, ಗುರುರಾಜ ಹಳ್ಳೂರ, ರಾಹುತ್ ಪೂಜಾರಿ, ಬಿ.ಎಲ್.ಇನಾಮದಾರ, ಮೊದಲಾದವರು ಉಪಸ್ಥಿತರಿದ್ದರು.
ಕನ್ನಡ ಜಾನಪದ ಪರಿಷತ್ ತಾಳಿಕೋಟೆ ಅದ್ಯಕ್ಷ ಸಿದ್ದನಗೌಡ ಕಾಶಿನಕುಂಟಿ ಸ್ವಾಗತಿಸಿದರು. ಶಿಕ್ಷಕ್ಷಾರ್.ಎಸ್.ವಾಲಿಕಾರ, ವಿಶ್ವನಾಥ ಗಣಾಚಾರಿ ನಿರೂಪಿಸಿದರು.