ಲಾಡ್ಲಾಪೂರ: ಹಾಜೀ ಸರ್ವರ್ ಜಾತ್ರೆ ರದ್ದು

ವಾಡಿ:ಎ.21: ಲಾಡ್ಲಾಪುರ ಗ್ರಾಮದ ಆರಾಧ್ಯ ದೈವ, ಭಾವೈಕ್ಯತೆಯ ಭಗವಂತ ಹಾಜೀ ಸರ್ವರ (ಹಾದಿ ಶರಣ) ಜಾತ್ರೆಯು ಕೊವೀಡ್‍ನ -2ನೇ ಅಲೇಯಿಂದಾಗಿ ತಾಲ್ಲೂಕಾಡಳಿತ ವತಿಯಿಂದ ರದ್ದುಪಡಿಸಿದ್ದು, ಲಾಕ್‍ಡೌನಲ್ಲಿ ನೀಡಿರುವ ಹಾಗೇ ಗ್ರಾಮಸ್ಥರು ಈ ಬಾರಿಯು ಸಹಕಾರ ನೀಡಬೇಕೆಂದು ತಹಸೀಲ್ದಾರ್ ಉಮಾಕಾಂತ ಹಳ್ಳೇ ಮನವಿ ಮಾಡಿದರು.

ಪಟ್ಟಣ ಸಮೀಪದ ಲಾಡ್ಲಾಪೂರ ಗ್ರಾ.ಪಂ ಆವರಣದಲ್ಲಿ ತಾಲ್ಲೂಕ ಆಡಳಿತ ಹಾಗೂ ವಾಡಿ ಪೋಲಿಸ್ ಠಾಣೆಯ ವತಿಯಿಂದ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾ.ಪಂ ಉಪಾಧ್ಯಕ್ಷ ಬಸವರಾಜಗೌಡ ಮಾಲೀಪಾಟೀಲ ಮಾತನಾಡಿ, ಕಾನೂನು ಸಾರ್ವಭೌಮನ ಆದೇಶವಾಗಿದ್ದು, ಕೆಲವೇ ಜನರಿಗೆ ಪಾಲನೆ ಮಾಡಲು ಹೇಳಲಾಗುತ್ತಿದೆ. ಮಾಲ್‍ಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳೇ 20 ಜನಕ್ಕೂ ಹೆಚಿರುತ್ತಾರೆ. ಸಿನೆಮಾ ಹಾಲಗಳನ್ನೆಲ್ಲಾ ಹಾಗೇ ಬೀಡಲಾಗುತ್ತಿದೆ. ನಿಯಮ ಎಲ್ಲದ್ದಕ್ಕಯ ಅನ್ವಯ ಆಗಲೀ, ಧಾರ್ಮಿಕ ಭಾವನೆಗೆ ಧಕ್ಕೆ ಪಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದಾಗ ತಕ್ಷಣವೇ ತಹಸೀಲ್ದಾರ ಹಳ್ಳೇ ಎದ್ದು, ನಿಂತು ನಾವೂ ಯಾವುದೇ ಭಾವನೇಗಳಿಗೆ ಧಕ್ಕೆ ಮಾಡುತ್ತಿಲ್ಲ. ಧಾರ್ಮಿಕ ಸಂಪ್ರದಾಯಬದ್ದ ಆಚರಣೆಗೆ ಅನುಮತಿ ನೀಡುತ್ತಿದ್ದೆವೆ ಆದರೆ, 5 ಜನಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದರು.

ಮುಖಂಡರಾದ ನಾಗೇಂದ್ರಪ್ಪ ಸಾಹುಕಾರ, ಸಾಬಣ್ಣ ಮುಸ್ಲಾ, ಸಾಬಣ್ಣ ಆನೇಮಿ ಮಾತನಾಡಿ, ಸರ್ಕಾರದ ಮಾರ್ಗಸೂಚಿ ಪ್ರಕಾರ ಜಾತ್ರೆ ರದ್ದು ಮಾಡೋಣ, ಇಲ್ಲವಾದಲ್ಲಿ ಜೈಲು ವಾಸ ಅನುಭವಿಸಬೇಕಾಗುತ್ತದೆ ಎಂದು ಮುಖಂಡರು ಗ್ರಾಮಸ್ಥರಿಗೆ ಮನವೊಲಿಸುವ ಪ್ರಯತ್ನ ಮಾಡಿದರು.

ಮನೆಯಲ್ಲಿಯೇ ಬೇಟೆ ಮಾಡಿ ನೈವಿಧ್ಯ ನೇರವೇರಿಸಲು ಅವಕಾಶ ನೀಡಬೇಕೆಂದು ಗ್ರಾಮಸ್ಥರು ಕೆಲಹೊತ್ತು ಪಟ್ಟು ಹಿಡಿದರೇ, ಇನ್ನು ಕೆಲವರು ಕುಸ್ತಿಗೆ ಅವಕಾಶ ನೀಡಬೇಕೆಂದು ಕೇಳಿದಾಗ ಇಡೀ ಸಭೆ ನಗೆಗಿಡಲ್ಲಿ ತೆಲಿತ್ತು. ಆರೋಗ್ಯ ನಿಯಮ ಪಾಲಿಸಿ ನೈವಿಧ್ಯ ನೀಡಬೇಕೆಂದೆ ಗ್ರಾಮಸ್ಥರ ಕೊನೆಯವರೆಗೂ ವಾದ ನಡೆಯಿತ್ತು.

ಸಿಪಿಐ ಕೃಷ್ಣಪ್ಪ ಕಲ್ಲದೇವರು ಮಾತನಾಡಿ, 2ನೇ ಅಲೇಯು ವೇಗವು ಅತ್ಯಂತ ವೇಗವಾಗಿ ಹರಡುತ್ತಿದ್ದು, ಆಸ್ಪತ್ರೆಗಳಲ್ಲಿ ಬೇಡ್, ಹಾಗೂ ಆಕ್ಸಿಜನ್ ಸಿಲಿಂಡರ್ ಕೊರತೆ ಇರುವುದು ಕೂಡಾ ತಮ್ಮ ಗಮನಕ್ಕಿದೆ. ಮನೇಯಲ್ಲಿಯೇ ದೇವರನ್ನು ನೆನದು ಹಾದಿಶರಣನ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು.

ಪ್ರೋಬೇಷನ್ ಎಸಿ ಡಾ. ಶ್ವೇತಾ, ಗ್ರಾ.ಪಂ ಅಧ್ಯಕ್ಷೆ ಸೋನಿಬಾಯಿ ತುಳಜಾರಾಮ, ಪಿಡಿಓ ವಿಲಾಸರಾವ ಕುಲಕರ್ಣಿ, ಮಾಜಿ ಅಧ್ಯಕ್ಷ ನಾಗೇಂದ್ರಪ್ಪ, ಮುಖಂಡರಾದ ದತ್ತಾತ್ರೆಯ ಗುತ್ತೇದಾರ, ಈರಣ್ಣ ಮಲ್ಕಂಡಿ, ದೊಡ್ಡಪ್ಪಗೌಡ ಪೋಲಿಸ್ ಪಾಟೀಲ್, ಬಸವರಾಜ ಎಣ್ಣಿ, ಹಣಮಂತ ಗಲಗಿನ, ಬಾಬು ವಾಲೀಕರ, ಸಾಬಣ್ಣ ಗೊಡಗ್, ಶಿವನಾಥ ಸಾಹುಗಂಧಿ, ವಿಶೇಷ ಪೇದೆ ದೊಡ್ಡಪ್ಪ ಪೂಜಾರಿ, ದತ್ತುಜಾನೆ, ಲಕ್ಷ್ಮಣ ತೇಲಕರ್ ಸೇರಿದಂತೆ 200ಕ್ಕೂ ಅಧಿಕ ಜನರು ಹಾಜರಿದ್ದರು. ಪಿಎಸ್‍ಐ ವಿಜಯಕುಮಾರ ಬಾವಗಿ ನಾನು ಹೇಳಿದ ಪ್ರಕಾರವೇ ಬರೆಯಬೇಕೆಂದು ಪತ್ರಿಕಾ ಮಿತ್ರರಿಗೆ ಮಾರ್ಗದರ್ಶನ ಮಾಡಿದರು. ಮುಖಂಡ ಶಾಂತಕುಮಾರ ಎಣ್ಣಿ ನಿರೂಪಿಸಿ ವಂದಿಸಿದರು.