ವಾಡಿ: ಏ.7: ಪಟ್ಟಣ ಸಮೀಪದ ಲಾಡ್ಲಾಪೂರ ಗ್ರಾಮದ ಆರಾಧ್ಯದೈವ ಹಜರತ ಹಾಜೀ ಸರ್ವರ(ಹಾದಿಶರಣ) ಜಾತ್ರೆಯು ಅತ್ಯಂತ ವಿಜೃಂಭಣೆಯಿಂದ ಬೆಳಗ್ಗೆ ದರ್ಗಾ ತಲುಪಿ ಮಜಾರಗೆ ಗಂಧ ಲೇಪನ ಮಾಡಿ ಫಾತೇಹಾ ಓದುವ ಮೂಲಕ ಜಾತ್ರೆಯು ಸಂಭ್ರಮ- ಸಡಗರದಿಂದ ಚಾಲನೆ ದೊರೆಯಿತ್ತು.
ಕಳೆದ 2-3 ವರ್ಷಗಳಿಂದ ಮಹಾಮಾರಿಗೆ ಕೊರೊನಾದಿಂದ ಕೇವಲ ಸಂಪ್ರದಾಯಕ್ಕೆ ಸೀಮಿತ ಮಾಡಲಾಗಿತ್ತು. ಈದೀಗ ಜಾತ್ರೆ ಎಂದರೆ ಜನಮನದಲ್ಲಿ ಖುಷಿ ಪಡುವಂತಾಗಿದೆ. ಜನರು ಮೋದಲೇ ಬೀಡಾರ ಹೂಡಿದ್ದಾರೆ. ಬೆಳಗ್ಗೆಯಿಂದ ಗುಡ್ಡಕ್ಕೆ ನೈವೆದ್ಯ ನೀಡುವ ಮೂಲಕ ಭಕ್ತಿಯನ್ನು ಸಮರ್ಪಿಸುತ್ತಿರುವುದು ಕಂಡು ಬಂತು.
ಲಾಡ್ಲಾಪೂರ ಗುಡ್ಡದ ಹಾಜೀ ಸರ್ವರ ಎಂದೇ ಪ್ರಖ್ಯಾತಿ ಪಡೆದ ಈ ಜಾತ್ರೆಯು ಮುಸ್ಲಿಂ- ಹಿಂದೂ ಸೇರಿ ಅದ್ದೂರಿಯಾಗಿ ಜಾತ್ರೆ ಮಾಡುವುದು ಹಾಗೂ ಮುಸ್ಲಿಂ ದರ್ಗಾಕ್ಕೆ ಹೂಗಾರ ಪೂಜಾರಿ ಇರುವುದು ಇಲ್ಲಿನ ವಿಷೇಶ.
ಗಂದೋತ್ಸವ: ಹೂಗಾರ ಮನೆಯಿಂದ ದೇವರ ಕಳಸ ತೆಗೆದುಕೊಂಡು ರಾತ್ರಿಯಲ್ಲಾ ಗ್ರಾಮದ ವಿವಿಧ ಬಡಾವಣೆಯ ಮೂಲಕ ಭಕ್ತಿ ಪರಾಕಷ್ಠೆಯನ್ನು ಮರೆಯಲಾಗುತ್ತದೆ. ಜನರು ಹಾದಿಶರಣನ ಗಂದೋತ್ಸವ-ಕಳಸಗಳನ್ನು ನೋಡಲು ಕಾತುರರಾಗಿ ಕಟ್ಟೆಯ ಮೇಲೆ ಕುಳಿತ್ತಿರುತ್ತಾರೆ.
ಲಾಡ್ಲಾಪೂರ ಜಾತ್ರೆಯು ಗ್ರಾಮದ ಸರ್ವ ಸಮುದಾಯ ಆಚರಿಸುವುದಲ್ಲದೇ, ಬಂಜಾರ(ಲಂಬಾಣಿ) ಸಮುದಾಯದ ಪ್ರತಿಯೊಬ್ಬರು ಹಾಜಿ ಸರ್ವರನ್ನು ಸ್ಮರಿಸುವುದು ಮತ್ತೊಂದು ವಿಷೇಶವಾಗಿದೆ. ಈ ಭಾಗದಿಂದ ತಮ್ಮ ಕೆಲಸ-ಕಾರ್ಯಗಳಿಗೆ ಹೊರ ರಾಜ್ಯಗಳಿಗೆ ಹೋಗಿರುವ ಬಂಜಾರ ಜನರು ಜಾತ್ರಾ ಸಮಯದಲ್ಲಿ ತಪ್ಪದೇ ಹಾಜರಾಗಿ ಭಕ್ತಿಯನ್ನು ಅರ್ಪಿಸುತ್ತಾರೆ.
ಜಾತ್ರಾ ಅಂಗವಾಗಿ ಗ್ರಾಮ ಪಂಚಾಯತ ವತಿಯಿಂದ ಭಕ್ತಾಧಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು ಕಂಡು ಬಂತು. ವಾಡಿ ಪೋಲಿಸ್ ಠಾಣೆ ವತಿಯಿಂದ ಸೂಕ್ತ ಪೋಲಿಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.