ಲಾಡ್ಲಾಪೂರ ಗ್ರಾಮಕ್ಕೆ ಪೊಲೀಸ್ ಸರ್ಪಗಾವಲು

ವಾಡಿ:ಎ.29: ಇಂದು ನಡೆಯಬೇಕಿದ್ದ ಹಾಜೀ ಸರ್ವರ (ಹಾದಿ ಶರಣ) ಜಾತ್ರೆಯನ್ನು ಜಿಲ್ಲಾಡಳಿತ ನಿಷೇದಿಸಿದ್ದು, ಗ್ರಾಮದ ಸುತ್ತಲು ಪೊಲೀಸ್ ಸರ್ಪಗಾವಲು ಕಂಡು ಬರುತ್ತಿದೆ.

ಚಿತ್ತಾಪೂರ ತಾಲ್ಲೂಕಿನ ಲಾಡ್ಲಾಪೂರ ಗ್ರಾಮಕ್ಕೆ ಒಳಬರುವರ ಪ್ರವೇಶವನ್ನು ಸಂಪೂರ್ಣವಾಗಿ ನೀಷೇಧಿಸಿದ್ದು, ಜನರ ಓಡಾಟಕ್ಕೆ ಬ್ರೇಕ್ ಬೀದಿದೆ. ಸಿಆರ್‍ಪಿಸಿ ಕಲಂ 144 ಜಾರಿಗೊಳಿಸಲಾಗಿದ್ದು, ದೇವರ ದರ್ಶನಕ್ಕೂ ನಿರ್ಬಂಧ ಹೇರಲಾಗಿದೆ. ಜನರು ಮನೆಯಲ್ಲಿಯೇ ದೇವರನ್ನು ನೆನೆಯಬೇಕಾಗಿದೆ.

ಲಾಕ್‍ಡೌನ್ ಜಾರಿಗೊಳಿಸಿ ಸರ್ಕಾರ ಆದೇಶ ನೀಡಿದ್ದು, ಈಗಾಗಲೇ ಜನರು ಮಹಾರಾಷ್ಟ್ರ , ಬೆಂಗಳೂರು, ತೆಲಾಂಗಾಣ, ಸೇರಿದಂತೆ ಬೇರೆ, ಬೇರೆ ರಾಜ್ಯಗಳಿಂದ ಹಳ್ಳಿಗಳಿಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಪ್ರತಿವರ್ಷ 50 ಸಾವಿರಕ್ಕೂ ಅಧಿಕ ಜನ ಹಾಗೂ 10 ಸಾವಿರಕ್ಕೂ ಅಧಿಕ ಕುರಿಗಳನ್ನು ಹರಕೆಯನ್ನಾಗಿ ದೇವರಿಗೆ ನೈವೆಧ್ಯ ಅರ್ಪಿಸುವ ಪದ್ದತಿ ಜನರದಾಗಿದ್ದು, ಇದನ್ನು ತಡೆಯಲು ತಹಸೀಲ್ದಾರ್ ಉಮಾಕಾಂತ ಹಳ್ಳೆ, ಸಿಪಿಐ ಕೃಷ್ಣಪ್ಪ ಕಲ್ಲದೇವರು, ಪಿಎಸ್‍ಐ ವಿಜಯಕುಮಾರ ಬಾವಗಿ ಹಾಗೂ ಪೇದೆಗಳು ಹಗಲು ರಾತ್ರಿ ಎನ್ನದೇ ಗ್ರಾಮದ ಸುತ್ತಲು ಕಟ್ಟೆಚ್ಚರ ವಹಿಸುತ್ತಿದ್ದಾರೆ.