ಬೀದರ, ಜು.6: ಬೀದರ ನಗರದ ನೂರನ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಡಿ.ಕೆ.ಇಂಟರನ್ಯಾಷನಲ್ ಲಾಡ್ಜ್ ಹಾಗೂ ಕಸ್ತೂರಿ ಲಾಡ್ಜ್‍ದಲ್ಲಿ ಕೆಲವು ವ್ಯಕ್ತಿಗಳು ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬೀದರ ರೌಡಿ ನಿಗೃಹ ದಳ ಅಧಿಕಾರಿಯಾದ ಗಾಂಧಿಗಂಜ್ ಪೊಲೀಸ್ ಠಾಣೆಯ ಪಿಐ ಹನುಮರೆಡ್ಡೆಪ್ಪಾ, ನೂತನ ನಗರ ಪೊಲೀಸ್ ಠಾಣೆಯ ಪಿಐ ವೆಂಕಟೇಶ ಕೆ.ಯಡಹಳ್ಳಿ ಹಾಗೂ ಸಿಬ್ಬಂದಿಯವರೊಂದಿಗೆ ಬೀದರ ನಗರದ ಡಿ.ಕೆ.ಇಂಟರನ್ಯಾಷನಲ್ ಲಾಡ್ಜ್ ಮೇಲೆ ದಾಳಿ ಮಾಡಿದ್ದು ಎರಡು ಕೋಣೆಗಳಲ್ಲಿ ಜೂಟಾಟ ಆಡುತ್ತಿದ್ದ 20 ಜನ ಆರೋಪಿತರಿಂದ 75,950 ರೂ.ಗಳು ಹಾಗೂ ಎರಡು ಸೆಟ್ ಇಸ್ಪೀಟ್ ಎಲೆಗಳನ್ನು ಹಾಗೂ ಕಸ್ತೂರಿ ಲಾಡ್ಜ್ ಮೇಲೆ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ 07 ಜನ ಆರೋಪಿತರಿಂದ 15,050 ರೂ.ಗಳು ಹಾಗೂ 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ಧ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.
ಸದರಿ ದಾಳಿಯಲ್ಲಿ ಪಾಲ್ಗೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿ, ಬಹುಮಾನ ನೀಡಲಾಗಿದೆ. ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರೆಯುತ್ತದೆ ಎಂದು ಬೀದರ ಪೊಲೀಸ್ ಅದೀಕ್ಷಕರ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.