ಲಾಟರಿ, ಸಾರಾಯಿ ಮಾರಾಟ ನಿಷೇದ ಮಾಡಿದ್ದು ಜೆಡಿಎಸ್ ಸರ್ಕಾರ


ಸಂಜೆವಾಣಿ ವಾರ್ತೆ
ಕುರುಗೋಡು:ಮಾ.26: ಲಾಟರಿ ಹಾಗೂ ಸಾರಾಯಿ ಮಾರಾಟ ನಿಷೇದ ಮಾಡಿದ್ದು ಜೆಡಿಎಸ್ ಸರ್ಕಾರದ ಕೊಡುಗೆ ಎಂದು ಜೆಡಿಎಸ್ ಪಕ್ಷದ ವಿಕಲಚೇತನ ಘಟಕದ ರಾಜ್ಯಾಧ್ಯಕ್ಷ ಎಸ್.ದೇವೆಂದ್ರಗೌಡ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಕಂಪ್ಲಿ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಭಾರತದಲ್ಲಿ ಮೊದಲ ಬಾರಿಗೆ ಅಂಗವಿಕಲರ ಸಮಾವೇಶ ಮಾಡಿದ್ದು ಮಾಜಿ ಸಿಎಂ ಕುಮಾರಸ್ವಾಮಿ. ಬಸ್‌ಗಳಲ್ಲಿ ವಿಕಲಚೇತನರಿಗೆ ಸೀಟ್‌ಗಳ ಮೀಸಲಾತಿ ನೀಡಿದ್ದು ಜೆಡಿಎಸ್ ಸರ್ಕಾರ. ಹಾಗೂ ದೇಶದಲ್ಲಿಯೇ ಪ್ರಥಮ ಬಾರಿಗೆ ವಿಕಲಚೇತನರಿಗೆ ಎಂಎಲ್‌ಸಿ ಮಾಡಿದ್ದು ಎಚ್.ಡಿ.ದೇವೇಗೌಡ ಸಿಎಂ ಆಗಿದ್ದಾಗ ಎಂದು ಹೇಳಿದರು.
ಜೆಡಿಎಸ್ ಜಿಲ್ಲಾ ಗೌರವಾಧ್ಯಕ್ಷ ಕೆ.ಎಂ.ಹೇಮಯ್ಯ ಸ್ವಾಮಿ ಮಾತನಾಡಿ, ಕಂಪ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರ ಕೊರತೆ ಇಲ್ಲ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವೆ. ಕಾರ್ಯಕರ್ತರು ಹೆಚ್ಚಿನ ಶ್ರಮದೊಂದಿಗೆ ನಮ್ಮ ಅಭ್ಯರ್ಥಿ ಗೆಲ್ಲಲು ಸಹಕರಿಸಬೇಕೆಂದು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷ ಪಿಎಸ್. ಸೋಮಲಿಂಗನಗೌಡ ಮಾತನಾಡಿ, ರೈತಾಪಿ ವರ್ಗ ನೆಮ್ಮದಿಯ ಜೀವನ ನಡೆಸಲು ರಾಜ್ಯದ ಜನತೆಗೆ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಅನಿವಾರ್ಯ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 30 ಹಾಸಿಗೆಯ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಹಾಗೂ ಪಂಚರತ್ನ ಯೋಜನೆ ಜಾರಿಯಾಗಲು ಪೂರ್ಣ ಬಹುಮತದೊಂದಿಗೆ ಜೆಡಿಎಸ್ ಸರ್ಕಾರ ಬರಬೇಕು. ಪ್ರಜ್ಞಾವಂತ ಮತದಾರರು ಜೆಡಿಎಸ್‌ಗೆ ಬೆಂಬಲಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ  ಪಕ್ಷದ ಜಿಲ್ಲಾಧ್ಯಕ್ಷ ಪಿಎಸ್. ಸೋಮಲಿಂಗನಗೌಡ ಹೇಮರೆಡ್ಡಿ, ನಾರಾಯಣರೆಡ್ಡಿ, ಶ್ರೀನಿವಾಸ, ಕರ‍್ಲಗುಂದಿ ಪಂಪಾಪತಿ, ಲಕ್ಷ್ಮಿನಾರಾಯಣ ರೆಡ್ಡಿ, ವಿಜಯಕುಮಾರಿ, ಕೋಮಲಾದೇವಿ, ಶಿವನಾರಾಯಣ, ಮುಕ್ಕಣ್ಣ, ವಿಬಿ ಗೌಡ, ಬಂಡೆಗೌಡ, ಪ್ರಸಾದ್, ಕೆ.ಎಚ್.ವೀರೇಶ್, ವಿಶ್ವನಾಥ ಸ್ವಾಮಿ, ಗೆಣಿಕೆಹಾಳು ಹಸನ್, ಸಿದ್ದಮ್ಮನಹಳ್ಳಿ ವೀರೇಶ, ಗವಿಸಿದ್ದಪ್ಪ , ಜೆಡಿಎಸ್ ಜಿಲ್ಲಾ ಗೌರವಾಧ್ಯಕ್ಷ ಕೆ.ಎಂ.ಹೇಮಯ್ಯ ಸ್ವಾಮಿ ಇತರರಿದ್ದರು.

One attachment • Scanned by Gmail