ಲಾಟರಿ ಮೂಲಕ ಸರಿತಾಗೆ ಒಲಿದ ಅಧ್ಯಕ್ಷ ಸ್ಥಾನ

ರಾಯಚೂರು, ಆ.೦೩-
ತಾಲೂಕಿನ ಪೂರತಿಪ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸರಿತಾ ಪ್ರಭಾಕರ್ ,ಉಪಾಧ್ಯಕ್ಷರಾಗಿ ತಿಮ್ಮಪ್ಪ ನಾಯಕ ಅಲ್ಕೂರ್ ಆಯ್ಕೆಯಾಗಿದ್ದಾರೆ.
೧೬ ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಎಸ್‌ಸಿಗೆ, ಉಪಾಧ್ಯಕ್ಷ ಸ್ಥಾನ ಎಸ್‌ಟಿಗೆ ಮೀಸಲಾಗಿತ್ತು.
ನಿನ್ನೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ಸರಿತಾ ಮತ್ತು ಶಶಿಕಲಾ ಅವರಿಗೆ ತಲಾ ೮ ಮತಗಳು ಬಂದಿದ್ದರಿಂದ ಸದಸ್ಯರ ಅಭಿಪ್ರಾಯದಂತೆ ಚುನಾವಣಾಧಿಕಾರಿ ಲಾಟರಿ ಮೂಲಕ ಆಯ್ಕೆ ಮಾಡಿದಾಗ ಸರಿತಾ ಅವರಿಗೆ ಅದೃಷ್ಟ ಒಲಿದು ಅಧ್ಯಕ್ಷರಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು ಈ ಸಂದರ್ಭದಲ್ಲಿ ಮುಖಂಡ ವಿಶ್ವನಾಥ ಪಾಟೀಲ ಅಲ್ಕೂರ್ ನರಸಿಂಹ ನಾಯಕ ಸದಸ್ಯರಾದ ಮಲ್ಲಿಕಾರ್ಜುನ, ಮಹಿಬೂಬ ಶಫಿ,ಸಂಗೀತಾ ಪಾಟೀಲ್, ಗೋವಿಂದಮ್ಮ, ನರಸಮ್ಮ ಇತರರಿದ್ದರು.