ಲಾಟರಿ ಎತ್ತುವ ಮೂಲಕ ಕೃಷಿ ಹೊಂಡ ರೈತರ ಆಯ್ಕೆ

ಸಂಜೆವಾಣಿ ವಾರ್ತೆ
ಇಂಡಿ:ಜ.14: ತಾಲೂಕಿನ ರೈತರಿಗೆ ಕೃಷಿ ಭಾಗ್ಯ ಯೋಜನೆ ಅಡಿ ಕೃಷಿ ಹೊಂಡ ಹಾಕಿ ಕೊಡಲು ರೈತರಿಂದ ಅರ್ಜಿ ಅಹ್ವಾನಿಸಲಾಗಿತ್ತು.
ಅದರಲ್ಲಿ ಇಂಡಿ ಹೊಬಳಿಗೆ 23 ಮತ್ತು ಬಳ್ಳೊಳ್ಳಿ ಹೋಬಳಿಗೆ 23 ಕೃಷಿ ಹೊಂಡ ಗುರಿ ನಿಗದಿಪಡಿಸಲಾಗಿತ್ತು.
ಇಂಡಿ ಹೋಬಳಿಯಿಂದ ಸಾಮಾನ್ಯರಿಗೆ 17 ಕೃಷಿಹೊಂಡ ಗುರಿ ನಿಗದಿ ಮಾಡಿದ್ದು 804 ಅರ್ಜಿ ಸ್ವಿಕರಿಸಲಾಗಿತ್ತು. ಪ.ಜಾ 4 ಕೃಷಿಹೊಂಡ ಗುರಿಗೆ 236 ಅರ್ಜಿ,ಪ.ಪಂಗಡ 2 ಕೃಷಿಹೊಂಡ ಗುರಿಗೆ 72 ಅರ್ಜಿ ಹೀಗೆ ಒಟ್ಟು 23 ಕೃಷಿಹೊಂಡ ಗುರಿಗೆ 1112 ಅರ್ಜಿಗಳು ಬಂದಿದ್ದವು.
ಬಳ್ಳೊಳ್ಳಿ ಹೋಬಳಿಯಿಂದ ಸಾಮಾನ್ಯರಿಗೆ 18 ಕೃಷಿಹೊಂಡ ಗುರಿ ನಿಗದಿ ಮಾಡಿದ್ದು 583 ಅರ್ಜಿ ಸ್ವಿಕರಿಸಲಾಗಿತ್ತು. ಪ.ಜಾ 4 ಕೃಷಿಹೊಂಡ ಗುರಿಗೆ 179 ಅರ್ಜಿ,ಪ.ಪಂಗಡ 1 ಕೃಷಿಹೊಂಡ ಗುರಿಗೆ 27 ಅರ್ಜಿ ಹೀಗೆ ಒಟ್ಟು 23 ಕೃಷಿಹೊಂಡ ಗುರಿಗೆ 789 ಅರ್ಜಿಗಳು ಬಂದಿದ್ದವು.
ಹೀಗಾಗಿ ಫಲಾನುಭವಿಗಳ ಆಯ್ಕೆ ರೈತ ಸಂಪರ್ಕ ಕೇಂದ್ರ ಇಂಡಿ ಮತ್ತು ಬಳ್ಳೊಳ್ಳಿ ಎಲ್ಲ ಫಲಾನುಭವಿಗಳ ಎದುರಿನಲ್ಲೆ ಫಲಾನುಭವಿ ರೈತರಿಂದಲೇ ಚೀಟಿ ಎತ್ತುವ ಮೂಲಕ ಪಾರದರ್ಶಕವಾಗಿ ಆಯ್ಕೆ ಮಾಡಲಾಯಿತು.
ಇಂಡಿ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ ಪ್ರಿಯದರ್ಶಿನಿ ಮತ್ತು ವಿ.ಎಸ್.ವಗದರಿಗಿ ಮತ್ತು ಬಳ್ಳೊಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಇಂಡಿಯ ಮಹಾದೇವಪ್ಪ ಏವೂರ, ಉಪ ತಹಸೀಲ್ದಾರ ಗೋಟ್ಯಾಳ, ಕೃಷಿ ಅಧಿಕಾರಿ ಎಂ.ಎಂ.ಹಿಟ್ನಳ್ಳಿ, ಬಿ.ಟಿ.ವಾಘಮೋರೆ ಉಪಸ್ಥಿತರಿದ್ದರು.