ಲಾಕ್ ಡೌನ್ ಹಿನ್ನೆಲೆ ವಾರಿಯರ್ಸ್ ಪೊಲೀಸರಿಗೆ ಶರಬತ್ ಮಜ್ಜಿಗೆ ವಿತರಣೆ

ಕೂಡ್ಲಿಗಿ.ಮೇ.1:- ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಜನರ ಆರೋಗ್ಯ ಕಾಪಾಡಲು ಲಾಕ್ ಡೌನ್ ಸಂದರ್ಭದಲ್ಲಿ ಹಗಲಿರುಳು ತಮ್ಮ ಪ್ರಾಣ ಲೆಕ್ಕಿಸದೆ ಬಿರುಬಿಸಿಲಲ್ಲಿ ಕರ್ತವ್ಯ ನಿರ್ವಹಿಸುವ ಕೊರೋನಾ ವಾರಿಯರ್ಸ್ ಗಳಾದ ಪೊಲೀಸ್ ಸಿಬ್ಬಂದಿಗಳಿಗೆ ಕೂಡ್ಲಿಗಿ ಭಗತ್ ಸಿಂಗ್ ಯುವವೇದಿಕೆ ಪದಾಧಿಕಾರಿಗಳು ನಿಂಬೂ ಶರಬತ್ ಹಾಗೂ ಮಜ್ಜಿಗೆ ವಿತರಿಸುತ್ತಿದ್ದಾರೆ.
ಕಳೆದೆರಡು ದಿನದಿಂದ ಭಗತ್ ಸಿಂಗ್ ಯುವ ವೇದಿಕೆಯ ಸಿದ್ದು, ವಿನಯ್, ವೀರೇಶ, ವಿನಾಯಕ, ಪವನ್, ಪ್ರಜ್ವಲ್, ವಿನಾಯಕ, ಚಂದ್ರಶೇಖರ ಸೇರಿದಂತೆ ಇತರರು ಸೇರಿ ಸಾರ್ವಜನಿಕರ ಪ್ರಾಣ ರಕ್ಷಿಸಲು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮದ್ಯಾಹ್ನ ದ ಉರಿಬಿಸಿಲಲ್ಲಿ ಕೊರೋನಾ ವಾರಿಯರ್ಸ್ ಆಗಿ ಪಟ್ಟಣದ ಮದಕರಿ ವೃತ್ತ, ಪಾದಗಟ್ಟೆ ಸರ್ಕಲ್ ಮತ್ತು ಪೊಲೀಸ್ ಠಾಣೆ ಮುಂಭಾಗದಲ್ಲಿ ಲಾಕ್ ಡೌನ್ ಕರ್ತವ್ಯ ನಿರ್ವಹಿಸುತ್ತಿರುವುದು ಆರಕ್ಷಕ ಸಿಬ್ಬಂದಿಗಳಿಗೆ ಭಗತ್ ಸಿಂಗ್ ಯುವ ವೇದಿಕೆ ಯುವಕರು ಸ್ವಯಂ ಪ್ರೇರಿತರಾಗಿ ನಿಂಬೂ ಶರಬತ್ ಹಾಗೂ ಮಜ್ಜಿಗೆ ನೀಡುವ ಸಾಮಾಜಿಕ ಕಳಕಳಿಯ ಕಾರ್ಯದಲ್ಲಿ ತೊಡಗಿದ್ದಾರೆ. ಪೊಲೀಸ್ ಸಿಬ್ಬಂದಿಗಳು ಯುವ ವೇದಿಕೆ ಸೇವಾ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.