ಲಾಕ್ ಡೌನ್ ಸಂದರ್ಭದಲ್ಲಿ ಅಸಾಯಕರಿಗೆ ಸ್ಪಂದಿಸುವುದೆ ನಮ್ಮ ಗುರಿ- ಚನ್ನು ಕುಮಾರ

ಲಿಂಗಸಗೂರು.ಜೂ.೦೩-ಕೊರೊನಾ ನಿಯಂತ್ರಣಕ್ಕಾಗಿ ಎಲ್ಲಡೆ ಲಾಕ್ ಡೌನ್ ಮಾಡುತ್ತಿರುವುದರಿಂದಾಗಿ ಹಲವಾರು ಜನತೆ ತೊಂದರೆಯಲ್ಲಿದ್ದಾರೆ ಅವರ ಹಸಿವು ನೀಗಿಸುವುದರೊಂದಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದು ನಿತಿನ್ ಡೆವಲಪರ್‍ಸ್ ಮುಖ್ಯಸ್ಥ ಚನ್ನು ಕುಮಾರ ಹೇಳುತ್ತಾರೆ.
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಯಾವ ಮಾರ್ಗದಿಂದಲಾದರು ಹಣ ಸಾಕಷ್ಟು ಗಳಿಸಬಹುದು ಆದರೆ ಮನುಷ್ಯರನ್ನು ಗಳಿಸುವುದು ಮುಖ್ಯವಾಗಿದೆ ಯಾಕೆಂದರೆ ಕೊರೊನಾ ನಮಗೆ ತಕ್ಕಪಾಠ ಕಲಿಸಿದೆ ನಿನ್ನೆ ಮೊನ್ನೆ ಹತ್ತಿರ ಇದ್ದವರೆ ಇಲ್ಲವಾಗುತ್ತಿದಾರೆ ನಾವು ಎಷ್ಟು ದಿನ ಬದುಕಿ ಇರುತ್ತೇವೆಯೊ ಬಲ್ಲವರಾರು ಅದಕ್ಕಾಗಿ ಇದೆಲ್ಲವನ್ನು ಕಣ್ಣಾರೆ ಕಂಡ ನಾನು ಜನರಿಗೆ ಮಿಡಿಯುವ ಕೆಲಸ ಮಾಡಬೇಕು ಎಂಬ ಬಯಕೆ ಹಾಗೂ ಕೊರೊನಾ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಮತ್ತು ಪತ್ರಿಕೆಗಳಲ್ಲಿ ಹಲವಾರು ಜನತೆ ಬಡವರಿಗಾಗಿ ಮಿಡಿಯುವದನ್ನು ಗಮನಿಸಿದ ನಾನು ನನ್ನ ಕೈಲಾದ ಸೇವೆಯನ್ನು ಏನಾದರು ಮಾಡಬೇಕು ಎನಿಸಿತು ಇದಕ್ಕೆ ಇನ್ನೊಂದು ಮುಖ್ಯ ಪ್ರೇರಣೆ ಎಂದರೆ ನಮ್ಮ ಭಾಗದ ಕೊಪ್ಪಳದ ಗವಿಮಠದ ಶ್ರೀಗಳ ಆಶಿರ್ವಾದ ಅವರ ವಾಣಿಯಂತೆ ಅವರು ಆಕಸ್ಮಿಕವಾಗಿ ನಮ್ಮ ಡೆಲಪರ್‍ಸಗೆ ಬಂದಾಗ ನೀವು ಯಾಕೆ ಅನ್ನದಾನ ಮಾಡಬಾರದು ಎನ್ನುವ ಕಿವಿಮಾತನ್ನು ಹೇಳಿದ್ದರು ಅಲ್ಲದೆ ದೇವದುರ್ಗದ ಶಾಸಕ ಶಿವನಗೌಡ ನಾಯಕರು ಸಹಿತ ಲಾಕ್ ಡೌನ್ ಸಂದರ್ಭದಲ್ಲಿ ಜನತೆಗೆ ಊಟದ ವ್ಯವಸ್ಥೆಯನ್ನು ಮಾಡಿರಿ ಅದಕ್ಕೆ ಸಕಲ ವ್ಯವಸ್ಥೆಯನ್ನು ಮಾಡುವುದಾಗಿಯು ಭರವಸೆ ನಿಡಿದ್ದರು ಇವರೆಲ್ಲರ ಪ್ರೋತ್ಸಾಹ ಮಾತುಗಳಿಂದ ಸ್ಪೂರ್ತಿಗೊಂಡಿರುವ ನಾನು ಕಳೆದ ಬಸವ ಜಯಂತಿಯಿಂದ ಪಟ್ಟಣದ ವಿವಿಧ ಆಸ್ಪತ್ರೆಗಳು, ಅಲೆಮಾರಿಗಳು, ವಾಹನ ಚಾಲಕರು, ನಿರ್ಗತಿಕರು, ಭಿಕ್ಷುಕರು,ಅನಾಥರು ಬಡವರು ಹೀಗೆ ವಿವಿಧ ಜನರಿಗೆ ಪ್ರತಿದಿನವು ಸುಮಾರು ಐದು ನೂರರಿಂದ ಆರೇಳು ನೂರು ಊಟದ ಪಾಕೀಟುಗಳು, ನೀರಿನ ಬಾಟಲ್ ಗಳು ಬಾಳೆಹಣ್ಣಿನ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದರು.
ಅಲ್ಲದೆ ಊಟ ತಯಾರು ಮಾಡುವಾಗ ನಮ್ಮ ತಂಡವು ಸಂಪೂರ್ಣವಾಗಿ ನಿಗಾವಹಿಸುತ್ತದೆ ಯಾವುದೆ ಕಾರಣಕ್ಕೂ ಊಟವು ಗುಣಮಟ್ಟ ಕಳೆದುಕೊಳ್ಳಬಾರದು ಅದಕ್ಕಾಗಿ ಗುಣಮಟ್ಟ ಕಾಪಾಡಿಕೊಂಡು ತಯಾರಿಸಲಾಗುತ್ತಿದೆ ನನ್ನವು ಬೇರೆಬೇರೆ ಕಡೆಯಲ್ಲಿ ಕೆಲಸಗಳಿದ್ದರು ಅವುಗಳ ಕಡೆಗೆ ಹೆಚ್ಚು ಗಮನಕೊಡದೆ ಊಟದ ತಯಾರಿಕೆ ಮತ್ತು ಅದರ ಹಂಚಿಕೆಯ ಕಡೆಗೆ ಹೆಚ್ಚು ಹೊತ್ತುಕೊಡುತ್ತಿದ್ದೇನೆ ಅದರಿಂದ ನನಗೆ ಏನೋ ಒಂದು ತೃಪ್ತಿದಾಯಕ ಎನಿಸುತ್ತದೆ ಅಲ್ಲದೆ ದೇವದುರ್ಗ ಶಾಸಕ ಶಿವನಗೌಡನಾಯಕ ಅಭಿಮಾನಿ ಬಳಗ ಎಂಬ ನಮ್ಮ ತಂಡದಿಂದ ಕೆಲಸ ಮಾಡಲಾಗುತ್ತಿದೆ.
ನಾನು ನಿರ್ಮಾಣ ಮಾಡಿರುವ ಲೇಔಟ್‌ಗಳಲ್ಲಿ ಹಲವಾರು ಗಿಡಮರ ಬೆಳೆಸುವ ಕೆಲಸ ಮಾಡುತ್ತಿರುವ ಖೃಷಿಯ ಕಡೆಗೆ ಗಮನಹರಿಸಿ ಮೀನುಕೃಷಿ ಮಾಡುತ್ತಿರುವೆ ಮುಂದೆಯು ಸಾಕಷ್ಟು ಬೇರೆ ಬೇರೆ ಜನೋಪಯೋಗಿಯಾದ ಕೆಲಸಗಳನ್ನು ಮಾಡಬೇಕೆಂಬುದರ ಬಗ್ಗೆ ಬಹಳಷ್ಟು ಉತ್ಸಾಹವಿದ್ದು ಕೊಪ್ಪಳದ ಗವಿಶ್ರೀಗಳ ಆಶಿರ್ವಾದ ಗುರುಹಿರಿಯರ ಪ್ರೋತ್ಸಾಹ ಒಡನಾಡಿಗಳ ಸಾಥ್ ನೀಡುವಿಕೆ ಬಳಸಿಕೊಂಡು ಇನ್ನು ಹಲವಾರು ಗುಣಾತ್ಮಕ ಸಮಾಜಮುಖಿ ಕೆಲಸಗಳನ್ನು ಮಾಡುವುದೆ ನನ್ನ ಗುರಿಯಾಗಿದೆ ಎನ್ನುತ್ತಾರೆ ಚನ್ನುಕುಮಾರವರು.
ಈ ಸಂದರ್ಭದಲ್ಲಿ ಗುರುರಾಜ ಕುಲಕರ್ಣಿ ವಂದಲಿ, ಮಂಜುನಾಥ ಪಾಟೀಲ್, ಎಂ,ಡಿ ಇಸ್ಮಾಯಿಲ್, ಹಾಜಪ್ಪ ಕರಡಕಲ್, ರವಿ ಹೊನ್ನಳ್ಳಿ, ಸುಕುಮುನಿ ಸೇರಿದಂತೆ ಇದ್ದರು.