ಲಾಕ್ ಡೌನ್ ವಿಸ್ತರಣೆ: 500 ಕೋಟಿ ಪ್ಯಾಕೇಜ್ ಘೋಷಣೆ

ಬೆಂಗಳೂರು, ಜೂ,3- ರಾಜ್ಯದಲ್ಲಿ ಕೊರೊನಾ ಸೋಂಕು ಸಂಖ್ಯೆ ಇನ್ನೂ ಕಡಿಮೆಯಾಗದೇ ಹಿನ್ನೆಲೆಯಲ್ಲಿ ಮೊದಲ ಬಾರಿಗೆ 1000 ಕೋಟಿ ರೂಪಾಯಿಗೂ ಅಧಿಕ ಪ್ಯಾಕೇಜ್ ಪ್ರಕಟಿಸಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಮತ್ತೆ 500 ಕೋಟಿ ರೂಪಾಯಿಗಳ ಮತ್ತೊಂದು ಪ್ಯಾಕೇಜ್ ಪ್ರಕಟಿಸಿದ್ದಾರೆ

ರಾಜ್ಯದಲ್ಲಿ ಸೋಂಕು ಇನ್ನೂ ಕಡಿಮೆಯಾಗದ ಹಿನ್ನೆಲೆಯಲ್ಲಿ ಲಾಕ್ ಡೌನ್ ವಿಸ್ತರಿಸಲು ತಜ್ಞರು ನೀಡಿರುವ ಸಲಹೆ ಹಿನ್ನೆಲೆಯಲ್ಲಿ ಜೂನ್ 14ರ ಬೆಳಗ್ಗೆ 6 ಗಂಟೆ ತನಕ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಹಿರಿಯ ಸಚಿವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಪ್ಯಾಕೇಜಿನಲ್ಲಿ ಬಿಟ್ಟುಹೋಗಿದ್ದ ಹಲವು ವಿಭಾಗಗಳಿಗೆ ಇಂದು 500 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಪ್ರಕಟಿಸಿ ಕೆಲವು ವಿನಾಯಿತಿಗಳನ್ನು ನೀಡಿರುವುದಾಗಿ ಅವರು ತಿಳಿಸಿದರು.

ಜೂನ್ ಜುಲೈ ತಿಂಗಳ ತೆರಿಗೆ ವಿನಾಯಿತಿಯನ್ನು ಕೈಗಾರಿಕೆಗಳಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಇಂದು ಪ್ರಕಟಿಸಿರುವ ಪ್ಯಾಕೇಜಿನಲ್ಲಿ ಚಲನಚಿತ್ರ , ದೂರದರ್ಶನ ಕಲಾವಿದರಿಗೆ ತಲಾ 3000 ರೂಪಾಯಿ, ಅರ್ಚಕರು ,ಅಡುಗೆ-ಸಹಾಯಕರು ಆಶಾ ಕಾರ್ಯಕರ್ತೆಯರಿಗೆ ತಲಾ ಮೂರು ಸಾವಿರ‌ ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದರು.

ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರಿಗೆ ತಲಾ 2000,ಮೀನುಗಾರರಿಗೆ ತಲಾ 3 ಸಾವಿರ ರೂಪಾಯಿ ನೀಡಲು ಕೂಡ ಸಮ್ಮತಿಸಲಾಗಿದೆ. ಎಂದು ಕೂಡ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಸಣ್ಣ ಕೈಗಾರಿಕೆಗಳ ವಿದ್ಯುತ್ ಬಿಲ್ ಪಾವತಿಗೆ ವಿನಾಯಿತಿ ವಿನಾಯತಿ ನೀಡಿರುವುದಾಗಿ ತಿಳಿಸಿದ ಅವರು ಅನುದಾನಿತ ಶಾಲಾ ಶಿಕ್ಷಕರಿಗೆ ತಲಾ ಐದು ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಅವರು ತಿಳಿಸಿದ್ದಾರೆ.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಡಾ.ಕೆ ಸುಧಾಕರ್ ಮಾತನಾಡಿ ಜುಲೈ ತಿಂಗಳಲ್ಲಿ 58 ಲಕ್ಷ ಜನರಿಗೆ ಲಸಿಕೆ ನೀಡುವ ಉದ್ದೇಶ ಹೊಂದಲಾಗಿದೆ..ಮುಂದಿನ ದಿನಗಳಲ್ಲಿ ಲಸಿಕೆ ನೀಡಿಕೆ ಪ್ರಮಾಣವನ್ನು ಹೆಚ್ಚು ಮಾಡುವುದಾಗಿ ಅವರು ತಿಳಿಸಿದರು.

ಇನ್ನೂ ನಿರ್ದರಿಸಿಲ್ಲ;

ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ- ಸಿಬಿಎಸ್ ಇ ಪರೀಕ್ಷೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದ್ದು ಅದೇ ಮಾದರಿಯಲ್ಲಿ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡುವ ಕುರಿತು ಚರ್ಚೆಗಳು ನಡೆಯುತ್ತಿವೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ

ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಜ್ಞರ ಜತೆ ಚರ್ಚೆ ನಡೆಸುತ್ತಿದ್ದಾರೆ ಸದ್ಯದಲ್ಲೇ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಹೇಳಿದರು

ಜನರ ಸಹಕಾರ ಅಗತ್ಯ

ರಾಜ್ಯದಲ್ಲಿ ಕೊರೊನಾ ಸೋಂಕು ಇನ್ನೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜೂನ್ 14ರ ತನಕ ವಿಸ್ತರಣೆ ಮಾಡಲಾಗಿದೆ ಎಂದು ಪ್ರಕಟಿಸಿದ ಅವರು ಜನರ ಸಹಕಾರ ಅಗತ್ಯ ಎಂದು ಯಡಿಯೂರಪ್ಪ ಹೇಳಿದರು.

ಸದ್ಯ ಜಾರಿಯಲ್ಲಿರುವ ಬಿಗಿಕ್ರಮಗಳ ಮುಂದುವರೆಯಲಿದೆ ರಾಜ್ಯದಲ್ಲಿ ಶೇಕಡಾ ಐದಕ್ಕಿಂತ ಕಡಿಮೆ ಮಾಡುವ ಪ್ರಕರಣಗಳು ಬರುವತನಕ ಮಾಡುವ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ ಜೂಮ್ 14 ರ ನಂತರ ಪಾಸಿಟೀವ್ ಪ್ರಕರಣ ಕಡಿಮೆಯಾದರೆ ಲಾಕ್ಡೌನ್ ತೆರವು ಮಾಡಲಾಗುವುದು ಇಲ್ಲದಿದ್ದರೆ ಅನಿವಾರ್ಯವಾಗಿ ಮತ್ತೆ ಮುಂದುವರಿಸುವ ಪ್ರಮೇಯ ಬರಬಹುದು ಎಂದು ತಿಳಿಸಿದ್ದಾರೆ

500 ಕೋಟಿ ಪ್ಯಾಕೇಜ್

ರಾಜ್ಯದಲ್ಲಿ ಕಳೆದ ತಿಂಗಳು 1000 ಕೋಟಿಗೂ ಅಧಿಕ ಮೊತ್ತದ ಪರಿಹಾರ ಪ್ಯಾಕೇಜ್ ಪ್ರಕಟಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮತ್ತೆ 500 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ

  • ಆಶಾ ಕಾರ್ಯಕರ್ತೆಯರಿಗೆ ತಲಾ 3000 ರೂಪಾಯಿ
  • ಅಂಗನವಾಡಿ ಕಾರ್ಯಕರ್ತರ ಸಹಾಯಕರಿಗೆ ತಲಾ 2000. ರೂಪಾಯಿ
  • ವೀನುಗಾರರು ಅರ್ಚಕರು ಅಡುಗೆಯವರಿಗೆ ತಲಾ ಮೂರು ಸಾವಿರ ರೂಪಾಯಿ
  • ಕೈಗಾರಿಕೆಗಳಿಗೆ ಜೂನ್ ಜುಲೈ ತಿಂಗಳ ತೆರಿಗೆ ವಿನಾಯಿತಿ
  • ಖಾಸಗಿ ಶಾಲಾ ಶಿಕ್ಷಕರಿಗೆ ತಲಾ ಐದು ಸಾವಿರ ರೂಪಾಯಿ ವಿಶೇಷ ಪರಿಹಾರ
  • ದೂರದರ್ಶನ ಮತ್ತು ಚಲನಚಿತ್ರ ಕಲಾವಿದರಿಗೆ ತಲಾ ಮೂರು ಸಾವಿರ ರೂಪಾಯಿ ವಿಶೇಷ ಪರಿಹಾರ
  • ಹೋಟೆಲ್ ಗಳಲ್ಲಿ ಫಾರ್ಸೆಲ್ ಗೆ ಅವಕಾಶ